ಹುಬ್ಬಳ್ಳಿ :ನಿನ್ನೆಯಷ್ಟೇ ಐಎಲ್ಎಸ್ ಸೇವೆಯನ್ನು ಪ್ರಾರಂಭಿಸುವ ಮೂಲಕ ವೈಜ್ಞಾನಿಕ ವಿಮಾನ ಲ್ಯಾಂಡಿಂಗ್ ಸೇವೆಯನ್ನು ಪ್ರಾರಂಭ ಮಾಡಿರುವ ಹುಬ್ಬಳ್ಳಿಯ ವಿಮಾನ ನಿಲ್ದಾಣ ಈಗ ಕಾರ್ಗೋ ಸೇವೆಯನ್ನು ಆರಂಭ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಹುಬ್ಬಳ್ಳಿ ವಾಣಿಜ್ಯ ಚಟುವಟಿಕೆಗಳ ಹಬ್. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಪ್ರಯಾಣಿಕರಿಗೆ ವಿಮಾನ ಸೇವೆ ನೀಡುವಂತೆ, ಸರಕು ಸಾಗಣೆ ಮಾಡಲು ಕಾರ್ಗೋ ಸೇವೆ ಪ್ರಾರಂಭ ಮಾಡಲು ಚಿಂತಿಸಿದ್ದು, ಮಾರ್ಚ್ 14ರಿಂದ ಕಾರ್ಗೋ ಸೇವೆಯ ಕಾಮಗಾರಿ ಆರಂಭಗೊಂಡಿದೆ.