ಹುಬ್ಬಳ್ಳಿ: ಲಾಭದ ಆಮಿಷವೊಡ್ಡಿ ಉದ್ಯಮಿ ಒಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಹೆಗ್ಗೇರಿ ಕಾಲೋನಿಯ ಉದ್ಯಮಿ ಗುರುಮೂರ್ತಿ ನಾಣ್ಯದ ಮೋಸ ಹೋದವರಾಗಿದ್ದಾರೆ.
ಪ್ಲಿಪ್‍ಕಾರ್ಟ್ ಕಂಪನಿಯ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದರೆ ಭರ್ಜರಿ ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ ಬರೋಬ್ಬರಿ 32 ಲಕ್ಷ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಉದ್ಯಮಿ ಗುರುಮೂರ್ತಿ ನಾಣ್ಯದ ಅವರಿಗೆ ಅಪರಿಚಿತ ಮಹಿಳೆ ಲಕ್ಷ್ಮಿ ಮೆಹರ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದಾಳೆ.
ಪ್ಲಿಪ್ ಕಾರ್ಟ್ ಕಂಪನಿಯ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದರೆ ತುಂಬಾ ಲಾಭ ಗಳಿಸಬಹುದು ಎಂದು ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 32 ಲಕ್ಷ ರೂ.ಗಳನ್ನು ಆನ್‌ಲೈನ್ ಮೂಲಕ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ ಎನ್ನಲಾಗ್ತಿದೆ.
ಪದೇ ಪದೆ ಹಣ ಹಾಕು ಎಂದು ಕೇಳುತ್ತಿದ್ದಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಹುಬ್ಬಳ್ಳಿ - ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ಣೂ ಓದಿ:ಆಸ್ಪತ್ರೆ ಬಾತ್ ರೂಮ್‌ನಲ್ಲಿ ಕತ್ತು ಕುಯ್ದುಕೊಂಡು ಮಹಿಳೆ ಆತ್ಮಹತ್ಯೆ.. ಕಾರಣ ಇಷ್ಟೇ..