ಕರ್ನಾಟಕ

karnataka

ETV Bharat / city

ಮರಿಮೊಮ್ಮಗಳಿಗೆ 'ನೈರಾ' ಎಂದು ನಾಮಕರಣ ಮಾಡಿದ ಬಿಎಸ್​ವೈ - ಮರಿಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗಿ

ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ತಮ್ಮ ಮರಿಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಭಾಗಿಯಾಗಿ ಮರಿಮೊಮ್ಮಗಳಿಗೆ 'ನೈರಾ' ಎಂದು ನಾಮಕರಣ ಮಾಡಿದರು.

BS Yediyurappa who named her granddaughter 'Naira'
ನೈರಾ ನಾಮಕರಣ ಸಮಾರಂಭ

By

Published : Feb 9, 2020, 10:59 PM IST

ಹುಬ್ಬಳ್ಳಿ: ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ತಮ್ಮ ಮರಿಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಭಾಗಿಯಾಗಿ ಮರಿಮೊಮ್ಮಗಳಿಗೆ 'ನೈರಾ' ಎಂದು ನಾಮಕರಣ ಮಾಡಿದರು.

ನೈರಾ ನಾಮಕರಣ ಸಮಾರಂಭ

ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ನಡೆದ ಸಮಾರಂಭದಲ್ಲಿ ಯಡಿಯೂರಪ್ಪ, ಪುತ್ರಿ ಪದ್ಮಾವತಿ ಹಾಗೂ ಅಳಿಯ ವಿರುಪಾಕ್ಷಪ್ಪ ಯಮಕನಮರಡಿ ಅವರ ಮಗ ಶಶಿಧರ ಯಮನಕನಮರಡಿ ಅವರ ಪುತ್ರಿಗೆ ನೈರಾ ಎಂದು ನಾಮಕರಣ ಮಾಡಿದ್ರು. ಖಾಸಗಿ ಹೋಟೆಲ್​ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಿಎಂ ಬಿಎಸ್​ವೈಗೆ ಜೊತೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಗೋವಿಂದ ಕಾರಜೋಳ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್ ಮತ್ತಿತರರು ಉಪಸ್ಥಿತರಿದ್ದರು.

ನಾಮಕರಣ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕುಟುಂಬದ ಸದಸ್ಯರ ಜೊತೆ ಸಂತಸದಿಂದ ಕಾಲ ಕಾಲಕಳೆದರು.

ABOUT THE AUTHOR

...view details