ಹುಬ್ಬಳ್ಳಿ :ಬಸ್ನಲ್ಲಿ ಮರೆತು ಹೋಗಿದ್ದ ಬ್ಯಾಗ್‌ನ ಮಹಿಳಾ ಪ್ರಯಾಣಿಕರೊಬ್ಬರಿಗೆ ಮರಳಿ ನೀಡುವ ಮೂಲಕ ಬಿಆರ್‌ಟಿಎಸ್ ಸಿಬ್ಬಂದಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಬಸ್ನಲ್ಲಿ ಪ್ರಯಾಣಿಕರೊಬ್ಬರು ಬ್ಯಾಗ್ ಮರೆತು ಹೋಗಿದ್ದರು.
ಪ್ರಯಾಣಿಕರು ಮರೆತಿದ್ದ ಬ್ಯಾಗ್ ನೀಡಿ ಪ್ರಾಮಾಣಿಕತೆ ಮೆರೆದ ಹುಬ್ಬಳ್ಳಿಯ ಬಿಆರ್‌ಟಿಎಸ್ ಚಾಲಕ - ಪ್ರಯಾಣಿಕರಿಗೆ ಬ್ಯಾಗ್ ಮರಳಿ ನೀಡಿದ ಬಸ್ ಚಾಲಕ
ಒಂದು ಮೊಬೈಲ್ ಫೋನ್, ಐದು ಸಾವಿರ ರೂ. ನಗದು ಹಾಗೂ ಒಂದು ಬಂಗಾರದ ಚೈನ್ ಇರುವುದನ್ನು ಕಂಡಿದ್ದಾರೆ. ನಂತರ ಹುಬ್ಬಳ್ಳಿ ರೈಲು ನಿಲ್ದಾಣದ ಬಿಎಸ್ಆರ್ಟಿಸಿ ಸಾರಿಗೆ ನಿಯಂತ್ರಕ ಐ. ಎಸ್. ಮುರನಾಳ ಅವರಿಗೆ ಬ್ಯಾಗ್ ನೀಡಿ, ಮಾಲೀಕರ ಪತ್ತೆಗೆ ಮುಂದಾಗಿದ್ದರು..

ಬಿಆರ್‌ಟಿಎಸ್ ಸಿಬ್ಬಂದಿ
ಬಸ್ನಲ್ಲಿ ಬ್ಯಾಗ್ ಕಂಡು ಪರಿಶೀಲಿಸಿದ ಚಾಲಕ ಜಿ ಸಿ ಹಿರೇಮಠ್ ಒಂದು ಮೊಬೈಲ್ ಫೋನ್, ಐದು ಸಾವಿರ ರೂ. ನಗದು ಹಾಗೂ ಒಂದು ಬಂಗಾರದ ಚೈನ್ ಇರುವುದನ್ನು ಕಂಡಿದ್ದಾರೆ. ನಂತರ ಹುಬ್ಬಳ್ಳಿ ರೈಲು ನಿಲ್ದಾಣದ ಬಿಎಸ್ಆರ್ಟಿಸಿ ಸಾರಿಗೆ ನಿಯಂತ್ರಕ ಐ ಎಸ್ ಮುರನಾಳ ಅವರಿಗೆ ಬ್ಯಾಗ್ ನೀಡಿ, ಮಾಲೀಕರ ಪತ್ತೆಗೆ ಮುಂದಾಗಿದ್ದರು.
ಬಳಿಕ ಬ್ಯಾಗ್ ಕಳೆದುಕೊಂಡಿದ್ದನ್ನ ಅರಿತ ಮಹಿಳೆ ಮರಳಿ ಬಂದಾಗ ಪರಿಶೀಲಿಸಿ ನಂತರ ಅವರಿಗೆ ಬ್ಯಾಗ್ ನೀಡಿದ್ದಾರೆ. ಚಾಲಕನ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.