ನವಲಗುಂದ: ನಿರಾಮಯ ಫೌಂಡೇಶನ್ ವತಿಯಿಂದ ಕುಂಬಾರ ಓಣಿಯ ಚೌಕಿ ಮಠದಲ್ಲಿಂದು, 21ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ 39ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ನವಲಗುಂದ; ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ರಕ್ತದಾನ ಶಿಬಿರ - ರಕ್ತದಾನ ಶಿಬಿರ
21ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಾಗೂ ಹುತಾತ್ಮರಾದ ವೀರಯೋಧರ ಬಲಿದಾನದ ಸ್ಮರಣಾರ್ಥವಾಗಿ ನಿರಾಮಯ ಫೌಂಡೇಶನ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಈ ವೇಳೆ 39ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ನಿರಾಮಯ ಫೌಂಡೇಶನ್ ಹಾಗೂ ವಿವಿಧ ಸಂಘಟನೆಯ ಸಹಕಾರದೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆ ಹಾಗೂ ದಿಕ್ಸೂಚಿ ಭಾಷಣಕಾರ ಕೆ. ಅಣ್ಣಾಮಲೈ (ಐಪಿಎಸ್ ಸ್ವಯಂ ನಿವೃತ್ತ) ಸಾಮಾಜಿಕ ಜಾಲತಾಣದ ಲೈವ್ ಮೂಲಕ ಮಾತನಾಡಿದರು. ವಿಶೇಷ ಅತಿಥಿಗಳಾಗಿ ಮಾಜಿ ಯೋಧ ರಾಮಪ್ಪ ತಳವಾರ ಮಾತನಾಡಿದರು.
ಈ ವೇಳೆ ಸುಹಾಸ ಆನೆಗುಂದಿ, ಕಿರಣ ರಾಯಬಾಗಿ, ಪ್ರಭು ಇಬ್ರಾಹಿಂಪುರ, ಶರಣಪ್ಪ ಹಕ್ಕರಕಿ, ಶ್ರೀಮತಿ ಸುಮಂಗಲಾ ಬೆಂಡಿಗೇರಿ, ಪವನ ಪಾಟೀಲ, ಗಿರಿಧರ್ ಹಿರೇಮಠ, ಸಂತೋಷ ನಾವಳ್ಳಿ, ಆನಂದ್ ಜಕ್ಕನಗೌಡರ, ಮಲ್ಲಿಕಾರ್ಜುನ ಸಂಗನಗೌಡ, ಬಸವರಾಜ ಮೀಸಿ, ಸಿದ್ದು ಪೂಜಾರ, ನಾಗರಾಜ ದುತ್ತಾರಿ, ಕಿರಣ ನಾವಳ್ಳಿ ಇದ್ದರು.