ಕರ್ನಾಟಕ

karnataka

ETV Bharat / city

ಬಿಜೆಪಿ ಪಾಲಾದ ಕುಂದಗೋಳ ಪಟ್ಟಣ ಪಂಚಾಯಿತಿ... ಗೆದ್ದವರ ವಿವರ ಇಂತಿದೆ - ಕುಂದಗೋಳ ಪಟ್ಟಣ ಪಂಚಾಯಿತಿ ಫಲಿತಾಂಶ ಸುದ್ದಿ

ನ. 12ರಂದು ಕುಂದಗೋಳ ಪಟ್ಟಣ ಪಂಚಾಯತಿಯ ಒಟ್ಟು 19 ವಾರ್ಡ್​ಗಳಿಗೆ ಚುನಾವಣೆ ನಡೆದಿತ್ತು. ಇಂದು ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಪ.ಪಂ ಗದ್ದುಗೆ ಭಾರತೀಯ ಜನತಾ ಪಕ್ಷದ ಪಾಲಾಗಿದೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿಯ ಅಭ್ಯರ್ಥಿಗಳು ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.

ಬಿಜೆಪಿ ಪಾಲಾದ ಕುಂದಗೋಳ ಪಟ್ಟಣ ಪಂಚಾಯಿತಿ

By

Published : Nov 14, 2019, 1:13 PM IST

ಹುಬ್ಬಳ್ಳಿ:ಭಾರೀ ಕುತೂಹಲ ಕೆರಳಿಸಿದ್ದ ಕುಂದಗೋಳ ಪಟ್ಟಣ ಪಂಚಾಯತ್​ ಚುನಾವಣೆ ಫಲಿತಾಂಶ ಇಂದು ಹೊರ ಬಿದ್ದಿದ್ದು, ಪ.ಪಂ ಗದ್ದುಗೆ ಭಾರತೀಯ ಜನತಾ ಪಕ್ಷದ ಪಾಲಾಗಿದೆ.

ಒಟ್ಟು 19 ಸ್ಥಾನಗಳ ಪೈಕಿ ಬಿಜೆಪಿ 12 ಸ್ಥಾನ ತನ್ನದಾಗಿಸಿಕೊಂಡಿದ್ದರೆ, ಕಾಂಗ್ರೆಸ್ 5 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪಕ್ಷೇತರರು ಎರಡು ಸ್ಥಾನಗಳಲ್ಲಿ ಗೆಲವು ಸಾಧಿಸಿದರೆ, ಜಿಡಿಎಸ್ ಖಾತೆ ತೆರೆಯಲು ವಿಫಲವಾಗಿದೆ.

ನ. 12ರಂದು ಕುಂದಗೋಳ ಪಟ್ಟಣ ಪಂಚಾಯತಿಯ ಒಟ್ಟು 19 ವಾರ್ಡ್​ಗಳಿಗೆ ಚುನಾವಣೆ ನಡೆದಿತ್ತು. ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿಯ ಅಭ್ಯರ್ಥಿಗಳು ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.

ಬಿಜೆಪಿ ಪಾಲಾದ ಕುಂದಗೋಳ ಪಟ್ಟಣ ಪಂಚಾಯಿತಿ

ಬಿಜೆಪಿಯಿಂದ ಹನುಮಂತಪ್ಪ ಪೀರಪ್ಪ ಮೇಲಿನಮನೆ(ವಾರ್ಡ್ ನಂ03), ಕಿರೇಸೂರ ಮಲ್ಲಿಕಾರ್ಜುನ ನಿಂಗಪ್ಪ(ವಾರ್ಡ್ ನಂ.05), ಸುನೀತಾ ಶಶಿಕಾಂತಗೌಡ ಪಾಟೀಲ(ವಾರ್ಡ್ ನಂ.6), ಕೋಕಾಟೆ ಪ್ರಕಾಶ ವಿಠ್ಠಲ (ವಾರ್ಡ್ ನಂ.07), ವಾಗೀಶ ತಿಪ್ಪಣ್ಣ ಗಂಗಾಯಿ (ವಾರ್ಡ್ ನಂ.09), ಮಂಜುನಾಥ ಕೊಟ್ರಯ್ಯ ಹಿರೇಮಠ (ವಾರ್ಡ್ ನಂ.10), ಭುವನೇಶ್ವರಿ ಶಿವಪ್ಪ ಕವಲಗೇರಿ(ವಾರ್ಡ್ ನಂ.11), ದೇಸಾಯಿ ಶಾಮಸುಂದರ ಬಿಸ್ಟೋ(ವಾರ್ಡ್ ನಂ.12), ಹನುಮಂತಪ್ಪ ಪಕ್ಕೀರಪ್ಪ ರಣತೂರ(ವಾರ್ಡ್ ನಂ.13), ಬಡ್ನಿ ಪ್ರವೀಣ ಗಂಗಪ್ಪ(ವಾರ್ಡ್ ನಂ.14), ನೀಲಮ್ಮ ಕರಿಬಸಪ್ಪ ಕುಂದಗೋಳ(ವಾರ್ಡ್ ನಂ.18), ಬಸಮ್ಮ ಪ್ರಕಾಶ ವಡಕಣ್ಣನವರ(ವಾರ್ಡ್ ನಂ.19) ಜಯ ಸಾಧಿಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಹನುಮವ್ವ ಕರಿಯಪ್ಪ ಕೋರಿ (ವಾರ್ಡ್ ನಂ.1), ಗಂಗಮ್ಮ ಅಡಿವೆಪ್ಪ ಬಂಡಿವಾಡ(ವಾರ್ಡ ನಂ.02), ಸರ್ತಾಜ್ ಬೇಗಂ ಬಾಬುಸಾಬ ಮುಲ್ಲಾ (ವಾರ್ಡ್ ನಂ.08), ಕಮಲಾಕ್ಷಿ ಯಲ್ಲಪ್ಪ ಕಾಲವಾಡ(ವಾರ್ಡ್ ನಂ.16), ಬಸವರಾಜ ಹನುಮಂತಪ್ಪ ತಳವಾರ(ವಾರ್ಡ್ ನಂ.17) ಜಯ ಸಾಧಿಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಗೆದ್ದ ಐದು ಅಭ್ಯರ್ಥಿಗಳ ಪೈಕಿ ನಾಲ್ಕು ಅಭ್ಯರ್ಥಿಗಳು ಮಹಿಳೆಯರಾಗಿರುವುದು ವಿಶೇಷವಾಗಿದೆ. ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದ ಮಲ್ಲಿಕಸಾಬ ಮೊದಿನಸಾಬ ಶಿರೂರ (ವಾರ್ಡ ನಂ.14) ಹಾಗೂ ದಿಲೀಪ ಪರಶುರಾಮ ಕಲಾಲ(ವಾರ್ಡ್ ನಂ.15) ಇವರು ಪಕ್ಷೇತರರಾಗಿ ಜಯ ಸಾಧಿಸಿದ್ದಾರೆ.

ಕಳೆದ ಬಾರಿ ಒಟ್ಟು 15 ವಾರ್ಡ್​ಗಳಲ್ಲಿ ಬಿಜೆಪಿ 6, ಕಾಂಗ್ರೆಸ್ 6 ಹಾಗೂ ಜೆಡಿಎಸ್ 3ಸ್ಥಾನ ಪಡೆದಿದ್ದವು. ಪ.ಜಾ. ಮೀಸಲಾತಿ ಬಂದಿದ್ದರಿಂದ ಬಿಜೆಪಿಯ ಯಲ್ಲವ್ವ ಭಜಂತ್ರಿ 30 ತಿಂಗಳು ಅಧ್ಯಕ್ಷರಾಗಿದ್ದರು. ನಂತರ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಆಗಿದ್ದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಿದವು. ಮೈತ್ರಿ ಬಳಿಕ ಜೆಡಿಎಸ್​ನ ಮಲ್ಲಿಕಾರ್ಜುನ ಕಿರೇಸುರ್ 10 ತಿಂಗಳು ಅಧಿಕಾರ ನಡೆಸಿದ್ದರು. ಜೆಡಿಎಸ್ ಬಳಿಕ ಕಾಂಗ್ರೆಸ್​​ನ ಅಜೀಜ್ ಕ್ಯಾಲಕೊಂಡ ಹಾಗೂ ಜಡ್ಡಿ ತಲಾ 10 ತಿಂಗಳು ಆಡಳಿತ ನಡೆಸಿದ್ದರು. ಕಳೆದ ಅವಧಿಗೆ ಮೂರು ಪಕ್ಷಗಳು ಅಧಿಕಾರದ ಗದ್ದುಗೆ ಏರಿದ್ದು ವಿಶೇಷವಾಗಿದ್ದು, ಈ ಬಾರಿ ಕುಂದಗೋಳ ಪ.ಪಂ ಭಾರತೀಯ ಜನತಾ ಪಕ್ಷದ ಪಾಲಾಗಿದೆ.

ABOUT THE AUTHOR

...view details