ಹುಬ್ಬಳ್ಳಿ: ಬಿಜೆಪಿ ಮುಖಂಡರೊಬ್ಬರು ಮಹಿಳೆಯ ಮೇಲೆ ದೌರ್ಜನ್ಯ ಎಸಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಮೀನು ವಿಚಾರಕ್ಕೆ ಮಹಿಳೆ ಮೇಲೆ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ: ವಿಡಿಯೋ ವೈರಲ್ - ಹುಬ್ಬಳ್ಳಿ
ಜಮೀನು ವಿಚಾರದಲ್ಲಿ ಮಹಿಳೆಯೊಬ್ಬಳು ನಮ್ಮ ಹೊಲವನ್ನ ನಮಗೆ ಬಿಟ್ಟುಕೊಡು ಎಂದು ಕೇಳಿಕೊಂಡಿದ್ದಾಳೆ. ಅದಕ್ಕೆ ಕ್ಯಾರೆ ಎನ್ನದೆ ಬಿಜೆಪಿ ಮುಖಂಡ ಗುರುನಾಥ್ ಗೌಡ ಹಾಗೂ ಮಹಿಳೆ ನಡುವೇ ಮಾತಿನ ಚಕಮಕಿ ನಡೆದಿದೆ.
ಬಿಜೆಪಿ ಮುಖಂಡ
ಹುಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ದಿ.ಯೋಗೇಶ ಗೌಡ ಸಹೋದರ ಹಾಗೂ ಬಿಜೆಪಿ ಮುಖಂಡ ಗುರುನಾಥ್ ಗೌಡ ಎಂಬುವವರೇ ಮಹಿಳೆ ಮೇಲೆ ದೌರ್ಜನ್ಯ ಎಸಗಿದವರು. ಜಮೀನು ವಿಚಾರದಲ್ಲಿ ಮಹಿಳೆಯೊಬ್ಬಳು ನಮ್ಮ ಹೊಲವನ್ನ ನಮಗೆ ಬಿಟ್ಟುಕೊಡು ಎಂದು ಕೇಳಿಕೊಂಡಿದ್ದಾಳೆ. ಅದಕ್ಕೆ ಕ್ಯಾರೆ ಎನ್ನದೆ ಬಿಜೆಪಿ ಮುಖಂಡ ಗುರುನಾಥ್ ಗೌಡ ಹಾಗೂ ಮಹಿಳೆ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಮಹಿಳೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಮಹಿಳೆಯನ್ನು ನೂಕಾಡಿ ಧಮ್ಕಿ ಹಾಕಿದ್ದಾನೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.