ಕರ್ನಾಟಕ

karnataka

ETV Bharat / city

ಕುಂದಗೋಳ ಕ್ಷೇತ್ರಕ್ಕೆ ಒಳ್ಳೆದಾಗೋದಾದ್ರೆ ನನ್ನ ಬಲಿ ಕೊಡಲಿ: ರೇಣುಕಾಚಾರ್ಯಗೆ ಡಿಕೆಶಿ ತೀರುಗೇಟು - undefined

ಡಿಕೆಶಿ ಮಾರಿ ಹಬ್ಬಕ್ಕೆ ಬಲಿ ಕೊಡೋ ಕೋಣ ಎಂಬ ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಡಿ.ಕೆ.ಶಿವಕುಮಾರ್​ ತೀರುಗೇಟು. ಕುಂದಗೋಳ ಕ್ಷೇತ್ರಕ್ಕೆ ಒಳ್ಳೆದಾಗೋದಾದ್ರೆ ನನ್ನನ್ನ ಬಲಿ ಕೊಡಲಿ ಎಂದ ಸಚಿವ.

ಸಚಿವ ಡಿ ಕೆ ಶಿವಕುಮಾರ್​

By

Published : May 11, 2019, 7:22 PM IST

ಹುಬ್ಬಳ್ಳಿ:ಕುಂದಗೋಳ ಕ್ಷೇತ್ರಕ್ಕೆ ಒಳ್ಳೆದಾಗೋದಾದ್ರೆ ನನ್ನನ್ನ ಬಲಿ ಕೊಡಲಿ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಸಚಿವ ಡಿ.ಕೆ.ಶಿವಕುಮಾರ್​ ತೀರುಗೇಟು ನೀಡಿದರು.

ಕುಂದಗೋಳದಲ್ಲಿ ಮಾತನಾಡಿದ ಅವರು, ಕೋಣ ಬಲಿ ಕೊಡೋದು ಊರಿಗೆ ಒಳ್ಳೆಯದಾಗಲಿ ಅಂತ. ಕುಂದಗೋಳ ಕ್ಷೇತ್ರಕ್ಕೆ ಒಳ್ಳಯದಾಗೋದಾದ್ರೆ ಬಿಜೆಪಿಯವರು, ಕಾಂಗ್ರೆಸ್​ನವರು ನನ್ನ ಬಲಿ ಕೊಡಲಿ ಎಂದು ರೇಣುಕಾಚಾರ್ಯರ 'ಡಿಕೆಶಿ ಮಾರಿ ಹಬ್ಬಕ್ಕೆ ಬಲಿ ಕೊಡೋ ಕೋಣ' ಹೇಳಿಕೆಗೆ ತೀರುಗೇಟು ನೀಡಿದರು.

ಸಚಿವ ಡಿ.ಕೆ.ಶಿವಕುಮಾರ್​

ನನ್ನನ್ನ ಬಲಿ ಕೊಡುವುದರಿಂದ ಬಿಜೆಪಿಗೆ ಖುಷಿಯಾಗುವುದಾದರೆ ಬಲಿ ಕೊಡಲಿ. ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ ಎಂದು ಡಿವಿಜಿಯ ಮಂಕು ತಿಮ್ಮನ ಕಗ್ಗದ ಸಾಲುಗಳನ್ನು ಹೇಳಿ ವ್ಯಂಗ್ಯವಾಡಿದರು.

ಉತ್ತರ-ಕರ್ನಾಟಕ ಕಾಂಗ್ರೆಸ್​ನಲ್ಲಿ ಗಂಡಸಿರಿಲ್ಲ, ಹೀಗಾಗಿ ಡಿಕೆಶಿಯನ್ನು ಕುಂದಗೋಳ‌ ಉಸ್ತವಾರಿ ಮಾಡಿದ್ದಾರೆ ಎಂಬ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಪಾಟೀಲ್​ಗೆ ನಮ್ಮ ಪಾಟೀಲರೇ ಉತ್ತರ ನೀಡುತ್ತಾರೆ. ಅವರ ಜಿಲ್ಲೆಯ ನಮ್ಮ ಎಂ.ಬಿ.ಪಾಟೀಲರೇ ಉತ್ತರ ನೀಡುತ್ತಾರೆ ಎದರು.

For All Latest Updates

TAGGED:

ABOUT THE AUTHOR

...view details