ಹುಬ್ಬಳ್ಳಿ: ನಾವು ಇಷ್ಟು ದಿನ ಬೆಲೆ ಬಾಳುವ ಜಾವಾ, ರಾಯಲ್ ಎನ್ಫೀಲ್ಡ್, ಪಲ್ಸರ್, ಹೊಂಡಾ ಕಂಪನಿ ಬೈಕ್ ಕಳ್ಳತನ ಮಾಡುವ ಕಳ್ಳರನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಕಳ್ಳ ಡಿಫರೆಂಟ್. ಟಿವಿಎಸ್ ಎಕ್ಸೆಲ್ ಗಾಡಿಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಟಿವಿಎಸ್ ಎಕ್ಸೆಲ್ಗಳೇ ಈತನ ಟಾರ್ಗೆಟ್.. ಪೊಲೀಸರ ಅತಿಥಿಯಾದ ಕಳ್ಳ ! - ಹುಬ್ಬಳ್ಳಿ ಸುದ್ದಿ
ನಗರದ ರಸ್ತೆ ಅಕ್ಕಪಕ್ಕದಲ್ಲಿ ನಿಲ್ಲಿಸಲಾಗಿದ್ದ ಟಿವಿಎಸ್ ಎಕ್ಸೆಲ್ ಗಾಡಿಗಳನ್ನೇ ಈತ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡಿ ಮಾರಾಟ ಮಾಡುವ ಸಮಯದಲ್ಲಿ ಈತ ಬಲೆಗೆ ಬಿದ್ದಿದ್ದಾನೆ.
ಹಳೇ ಹುಬ್ಬಳ್ಳಿಯ ಪಡದಯ್ಯನ ಹಕ್ಕಲ ಬಡಾವಣೆಯ ನಿವಾಸಿ ನಾಗರಾಜ ಅಂಬಿಗೇರ ಬಂಧಿತ ಆರೋಪಿ. ಬಂಧಿತನಿಂದ 25 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಈತ ನಗರದ ರಸ್ತೆ ಅಕ್ಕಪಕ್ಕದಲ್ಲಿ ನಿಲ್ಲಿಸಲಾಗಿದ್ದ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ. ಟಿವಿಎಸ್ ಎಕ್ಸೆಲ್ ಗಾಡಿಗಳನ್ನೇ ಈತ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡಿ ಮಾರಾಟ ಮಾಡುವ ಸಮಯದಲ್ಲಿ ಈತ ಬಲೆಗೆ ಬಿದ್ದಿದ್ದಾನೆ.
ಆರೋಪಿ ನಾಗರಾಜ್ ಗ್ಯಾರೇಜ್ ನಡೆಸುತ್ತಿದ್ದು, ಅಲ್ಲಿಗೆ ಬರುವ ಸಾರ್ವಜನಿಕರನ್ನು ನಂಬಿಸಿ ಅವರಿಗೆ ಬೈಕ್ ಗಳನ್ನು ಮಾರಾಟ ಮಾಡುತ್ತಿದ್ದ. ಇದಲ್ಲದೇ ಬೆಲೆ ಬಾಳುವ ಬೈಕ್ಗಳಾದ್ರೆ ಮಾರಾಟ ಮಾಡುವುದು ಕಷ್ಟ ಎಂದು ಅರಿತು ಕಡಿಮೆ ಬೆಲೆಯ ಬೈಕ್ ಕಳ್ಳತನಕ್ಕೆ ಕೈ ಹಾಕಿ ಈತ ಪೊಲೀಸರ ಅತಿಥಿಯಾಗಿದ್ದಾನೆ