ಧಾರವಾಡ: ಲೋಕಸಭಾ ಚುನಾವಣಾ ಹಿನ್ನೆಲೆ ಮತದಾರರಲ್ಲಿ ಜಾಗೃತಿ ಮೂಡಿಸಲು ಬೈಕ್ ಜಾಥಾವನ್ನು ಜಿಲ್ಲಾ ಸ್ವೀಪ್ ಸಮಿತಿ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್, ಧಾರವಾಡ ಬೆಸುಗೆ ಗೆಳೆಯರ ಬಳಗದ ಸಹಯೋಗದಲ್ಲಿ ನಡೆಸಲಾಯಿತು.
ಮತದಾರರಲ್ಲಿ ಜಾಗೃತಿ ಮೂಡಿಸಲು ಬೈಕ್ ಜಾಥಾ ಆಯೋಜನೆ - undefined
ಲೋಕಸಭಾ ಚುನಾವಣಾ ಹಿನ್ನೆಲೆ ಮತದಾರರಲ್ಲಿ ಜಾಗೃತಿ ಮೂಡಿಸಲು ಬೈಕ್ ಜಾಥಾವನ್ನು ಧಾರವಾಡದಲ್ಲಿ ಆಯೋಜಿಸಲಾಗಿದೆ.
![ಮತದಾರರಲ್ಲಿ ಜಾಗೃತಿ ಮೂಡಿಸಲು ಬೈಕ್ ಜಾಥಾ ಆಯೋಜನೆ](https://etvbharatimages.akamaized.net/etvbharat/images/768-512-2997829-thumbnail-3x2-lek.jpg)
ಎಪ್ರಿಲ್ 23 ರಂದು ತಪ್ಪದೆ ಮತದಾನ ಮಾಡಿ ಎಂಬ ಸಂದೇಶದೊಂದಿಗೆ ವಿಶೇಷವಾಗಿ ಅಲಂಕರಿಸಿದ್ದ ವಾಹನವನ್ನು ಕಲಾವಿದ ಮಂಜುನಾಥ ಹಿರೇಮಠ ಚಲಾಯಿಸಿದರು. ಉಳಿದ ಎಲ್ಲಾ ವಾಹನಗಳನ್ನು ಮಹಿಳೆಯರೇ ಮುನ್ನಡೆಸಿದರು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ , ಜಿಪಂ ಸಿಇಒ ಡಾ.ಬಿ.ಸಿ.ಸತೀಶ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಜಾನನ ಮನ್ನಿಕೇರಿ ಹಸಿರು ನಿಶಾನೆ ತೋರಿ ಜಾಥಾಕ್ಕೆ ಚಾಲನೆ ನೀಡಿದರು.
ಮತದಾನ ಜಾಗೃತಿ ಕಲಾ ತಂಡದ ಎಫ್.ಬಿ. ಕಣವಿ, ಸಿ.ಎಂ ಕೆಂಗಾರ, ಬಿ.ಎನ್ ಗೊರವರ, ಜಿ.ಟಿ.ದೊಡಮನಿ , ಪ್ರಮಿಳಾ ಜಕ್ಕಣ್ಣವರ, ಕೀರ್ತಿವತಿ ವ್ಹಿ.ಎನ್, ಭಾರತಿ ಮನ್ನಿಕೇರಿ , ಎಂ ಆರ್.ಪಾಲ್ತಿ, ಜೆ.ಎಂ.ಗಾಮನಗಟ್ಟಿ, ಮಂಜುನಾಥ ಮದ್ನೂರ ಮತ್ತಿತರರು ಜಾಗೃತಿ ಗೀತೆಗಳನ್ನು ಹಾಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ಸಂಚರಿಸಿತು.