ಧಾರವಾಡ: ಕಾರ್ ಮತ್ತು ಸ್ಕೂಟಿ ಮಧ್ಯೆ ಅಪಘಾತ ಸಂಭವಿಸಿ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ಹೊರವಲಯದ ನವಲೂರ ರೈಲ್ವೆ ನಿಲ್ದಾಣ ಬಳಿ ನಡೆದಿದೆ. ಸದಾನಂದ ಸಾಮ್ರಾಣಿ ಮತ್ತು ರವಿ ಹಾವನೂರ ಮೃತಪಟ್ಟವರೆಂದು ತಿಳಿದುಬಂದಿದೆ.
ಧಾರವಾಡ ಬಳಿ ಕಾರು-ಸ್ಕೂಟಿ ಮಧ್ಯೆ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು - ಕಾರು ಸ್ಕೂಟಿ ಡಿಕ್ಕಿ
ಧಾರವಾಡ ಹೊರವಲಯದ ನವಲೂರ ಬಳಿ ಅಪಘಾತ ಸಂಭವಿಸಿ ಇಬ್ಬರು ಸ್ಕೂಟಿ ಸವಾರರು ಮೃತಪಟ್ಟಿದ್ದಾರೆ.

accident
ಮೃತರಿಬ್ಬರು ಧಾರವಾಡದ ಮದಾರಮಡ್ಡಿಯ ನಿವಾಸಿಗಳು ಎಂದು ಹೇಳಲಾಗುತ್ತಿದೆ. ವೇಗವಾಗಿ ಬರುತ್ತಿದ್ದ ಕಾರ್ ಹಾಗೂ ಸ್ಕೂಟಿ ಮಧ್ಯೆ ಅಪಘಾತ ಸಂಭವಿಸಿದೆ. ಪರಿಣಾಮ, ಇಬ್ಬರು ಸವಾರರು ಸ್ಥಳದಲ್ಲೇ ಅಸುನೀಗಿದ್ದಾರೆ. ಇಬ್ಬರ ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ.
ಧಾರವಾಡ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.