ಧಾರವಾಡ:ಲಾರಿ ಮತ್ತು ಎರಡು ಕಾರುಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಲಾರಿ ಚಾಲಕನ ಕಾಲು ತುಂಡಾಗಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಲಾರಿ ಮತ್ತು ಕಾರು ನಡುವೆ ಸರಣಿ ಅಪಘಾತ: ಲಾರಿ ಚಾಲಕನ ಕಾಲು ಕಟ್ - undefined
ಲಾರಿ ಮತ್ತು ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಲಾರಿ ಚಾಲಕನ ಕಾಲು ತುಂಡಾಗಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತ
ಧಾರವಾಡ ತಾಲೂಕಿನ ತೇಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿಈ ಘಟನೆ ನಡೆದಿದೆ. ಹೆದ್ದಾರಿಯಿಂದ ಕೆಳಗೆ ಉರುಳಿದ ಒಂದು ಕಾರು, ರಸ್ತೆ ಮೇಲೆಯೆ ಇನ್ನೊಂದು ಕಾರು ಬಿದ್ದಿದ್ದು, ಲಾರಿ ಪಲ್ಟಿಯಾಗಿದೆ.
ಲಾರಿ ಚಾಲಕನ ಕಾಲು ಕಟ್ ಆಗಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಗಾಯಗೊಂಡವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗರಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.