ಹುಬ್ಬಳ್ಳಿ: ದಾರಿ ತಪ್ಪಿ ಬಂದು ಆಶ್ರಯವಿಲ್ಲದೆ ಮೂರು ದಿನಗಳಿಂದ ಅಲೆದಾಡುತ್ತಿದ್ದ 75 ವರ್ಷದ ವೃದ್ಧೆಯೊಬ್ಬರಿಗೆ ಆಶ್ರಯ ಕಲ್ಪಿಸುವ ಮೂಲಕ ನಗರದ ಬೆಂಡಿಗೇರಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ವೃದ್ಧೆ ಹೆಸರು ರಾಜೇಶ್ವರಿ. ಮೂಲತಃ ದಾವಣಗೆರೆ ಜಿಲ್ಲೆಯವರು. ಮನೆ ತೊರೆದು ಎಷ್ಟೋ ದಿನಗಳಾಗಿದೆ. ದಾವಣಗೆರೆಯ ಮಠವೊಂದರಲ್ಲಿ ವಾಸವಿದ್ದ ಈಕೆಯನ್ನು ಮಠದವರು ಹುಬ್ಬಳ್ಳಿಯ ಮಠವೊಂದರಲ್ಲಿ ಇರಲು ನಿಮಗೆ ವ್ಯವಸ್ಥೆ ಮಾಡಿದ್ದೇವೆ. ನೀವು ಹುಬ್ಬಳ್ಳಿಗೆ ಹೋಗಿ ಎಂದು ಬಸ್ ಹತ್ತಿಸಿ ಕಳಿಸಿದ್ದಾರೆ.
ವೃದ್ಧೆಗೆ ನೆರವಾದ ಬೆಂಡಿಗೇರಿ ಪೊಲೀಸರು ಅವರ ಮಾತು ನಂಬಿ ಬಂದ ವೃದ್ಧೆ ಇಲ್ಲಿನ ಮಠಗಳಿಗೆ ಅಲೆದು ಅಲೆದು ಸುಸ್ತಾದರು. ಗಲ್ಲಿ ಗಲ್ಲಿಯಲ್ಲಿ ತಿರುಗುತ್ತಿದ್ದ ವೃದ್ಧೆಯನ್ನು ಎಲ್ಲಿಂದ ಬಂದಿದ್ದೀರಾ ಎಂದು ಸಾರ್ವಜನಿಕರು ವಿಚಾರಿಸಿದಾಗ, ದಾವಣಗೆರೆ ಎಂದಿದ್ದಾರೆ. ಆಗ ಹುಬ್ಬಳ್ಳಿಯ ವೀರಾಪುರ ಓಣಿಯ ಸಾರ್ವಜನಿಕರು ಕೊರೊನಾ ಭಯದಿಂದ ಅಲ್ಲಿಂದ ಹೋಗುವಂತೆ ಒತ್ತಡ ಹಾಕಿದ್ದಾರೆ.
ಈ ಕುರಿತು ಮಾಹಿತಿ ತಿಳಿದ ಬೆಂಡಿಗೇರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ವೃದ್ಧೆಯ ಕಥೆ ಕೇಳಿ ಬೆಂಡಿಗೇರಿ ವಸತಿ ನಿಲಯಕ್ಕೆ ಸೇರಿಸಿದ್ದಾರೆ.