ಕರ್ನಾಟಕ

karnataka

ETV Bharat / city

ಮುಂದುವರೆದ ಸಿಬಿಐ ತನಿಖೆ: ಮತ್ತೊಬ್ಬರನ್ನು ಬಲಿ ಪಶು ಮಾಡಬೇಡಿ ಎಂದು ಮುತ್ತಗಿ‌ ಬೇಸರದ ಮಾತು - Basavaraja Muthagi attended CBI hearing

ಸಿಬಿಐ ತನಿಖೆಯಲ್ಲಿ ಸಾಕಷ್ಟು ವಿಷಯಗಳು ಬಯಲಿಗೆ ಬರಲಿವೆ. ಇವತ್ತು ನಾನು ಕೂಡ ಸಿಬಿಐ ಮುಂದೆ ಸಾಕಷ್ಟು ವಿಷಯ ಹೇಳಲಿದ್ದೇನೆ. ನನ್ನ ನಂಬಿದ ಹುಡುಗರ ಸಲುವಾಗಿ ಇದನ್ನು ಮಾಡುತ್ತೇನೆ. ನಾನು ವಿನಯ್​ ಪರ ಅಥವಾ ವಿರುದ್ಧ ಮಾತಾಡುತ್ತಿಲ್ಲ. ಸಿಬಿಐ ಮುಂದೆ ಇದುವರೆಗೂ ಹೇಳದೇ ಇರೋ ವಿಚಾರವನ್ನು ಹೇಳುತ್ತೇನೆ..

Basavaraja Muthagi
ಬಸವರಾಜ ಮುತ್ತಗಿ

By

Published : Jul 9, 2021, 1:11 PM IST

ಧಾರವಾಡ :ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಮತ್ತೆ ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ಆರೋಪಿ ಬಸವರಾಜ ಮುತ್ತಗಿ ಅವರ ಹೇಳಿಕೆ ಕುತೂಹಲ ಕೆರಳಿಸಿದೆ.

ಮತ್ತೊಬ್ಬರನ್ನು ಬಲಿ ಪಶು ಮಾಡಬೇಡಿ ಎಂದು ಮುತ್ತಗಿ‌ ಬೇಸರದ ಮಾತು

ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್‌ಗೌಡ ಹತ್ಯೆ ಪ್ರಕರಣದ ಸಿಬಿಐ ತನಿಖೆ ಇಂದು ಕೂಡ ಮುಂದುವರೆದಿದೆ. ನಿನ್ನೆ ಹಲವಾರು ಜನರನ್ನು ವಿಚಾರಣೆಗೊಳಪಡಿಸಿದ್ದ ಸಿಬಿಐ ಅಧಿಕಾರಿಗಳು, ಇಂದು ಹಲವರನ್ನು ವಿಚಾರಣೆ ಮಾಡಿದ್ದಾರೆ.

ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ವಿಚಾರಣೆಗೆ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತ್ತೊಬ್ಬರನ್ನು ಬಲಿ ಪಶು ಮಾಡಬೇಡಿ. ನಾನು ಕೂಡ ಅಂತಹ ಮನಸ್ಥಿತಿಯವನಲ್ಲ. ಪ್ರಾಮಾಣಿಕವಾಗಿ ಹೋರಾಟ ಮಾಡಿದವನು. ಯಾರ ರಾಜಕೀಯ ಉದ್ದೇಶಕ್ಕೆ ಯೋಗೇಶ್‌ಗೌಡ ಕೊಲೆಯಾಗಿದೆ ಅನ್ನೋದು ಗೊತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಬಿಐ ತನಿಖೆಯಲ್ಲಿ ಸಾಕಷ್ಟು ವಿಷಯಗಳು ಬಯಲಿಗೆ ಬರಲಿವೆ. ಇವತ್ತು ನಾನು ಕೂಡ ಸಿಬಿಐ ಮುಂದೆ ಸಾಕಷ್ಟು ವಿಷಯ ಹೇಳಲಿದ್ದೇನೆ. ನನ್ನ ನಂಬಿದ ಹುಡುಗರ ಸಲುವಾಗಿ ಇದನ್ನು ಮಾಡುತ್ತೇನೆ. ನಾನು ವಿನಯ್​ ಪರ ಅಥವಾ ವಿರುದ್ಧ ಮಾತಾಡುತ್ತಿಲ್ಲ. ಸಿಬಿಐ ಮುಂದೆ ಇದುವರೆಗೂ ಹೇಳದೇ ಇರೋ ವಿಚಾರವನ್ನು ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮುತ್ತಗಿ ಪರವಾಗಿ ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಪಿಲ್ ಸಿಬಲ್ ವಾದ ಮಂಡಿಸಿದ್ದು ಗೊತ್ತಿರಲಿಲ್ಲ. ಅವರನ್ನು ವಾದಕ್ಕೆ ಕರೆಯುವಷ್ಟು ದೊಡ್ಡವನು ನಾನಲ್ಲ. ಆದರೆ, ಅವರು ವಾದಿಸಿದ್ದು ಖುಷಿ ತಂದಿದೆ. ಹೀಗಾಗಿ, ಈಗಿರೋ ವಕೀಲರಿಂದ ಎನ್‌ಒಸಿ ಪಡೆಯುತ್ತೇನೆ. ಕಪಿಲ್ ಅವರನ್ನು ಯಾರು ನೇಮಿಸಿದ್ದಾರೋ ಗೊತ್ತಿಲ್ಲ. ಒಂದು ಕಡೆ ಜಾಮೀನು ರದ್ದಿಗೆ ಆಗ್ರಹ ನಡೆದಿದೆ. ಕೋರ್ಟ್​ನಲ್ಲಿ ಈ ಬಗ್ಗೆ ವಾದ ಮಂಡಿಸಲಾಗಿದೆ. ಇನ್ನೊಬ್ಬರ ಜಾಮೀನು ರದ್ದು ಮಾಡಲು ಕೋರುವವರ ಮನಸ್ಥಿತಿ ಅರ್ಥವಾಗುತ್ತೆ.

ಅಂಥವರ ಉದ್ದೇಶ ಏನು ಅನ್ನೋದು ಗೊತ್ತಾಗುತ್ತಿದೆ. ಇದೆಲ್ಲವೂ ನನಗೆ ಅರ್ಥವಾಗುತ್ತಿಲ್ಲ ಎಂದು ಧಾರವಾಡದಲ್ಲಿ ಮುತ್ತಗಿ ಹೇಳಿದ್ದು, ಯೋಗೇಶ್‌ಗೌಡ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:ಯೋಗೀಶ್‌ ಗೌಡ ಕೊಲೆ ಪ್ರಕರಣ: ಜಿ.ಪಂ ಉಪಾಧ್ಯಕ್ಷ ಕರಿಗಾರ, ನಾಗರಾಜ ಗೌರಿಗೆ ಸಿಬಿಐ ಬುಲಾವ್

ABOUT THE AUTHOR

...view details