ಕರ್ನಾಟಕ

karnataka

ETV Bharat / city

ಲಿಂಗಾಯತ ಸಮುದಾಯಕ್ಕೆ ಶೆ.16 ರಷ್ಟು ಮೀಸಲು ನೀಡಿ:  ಹೊರಟ್ಟಿ ಆಗ್ರಹ - ವೀರಶೈವ ಲಿಂಗಾಯತ ಸಮಾಜಕ್ಕೂ ಶೇ.16 ರಷ್ಟು ಮೀಸಲಾತಿ ಕಲ್ಪಿಸಬೇಕು

ರಾಜ್ಯದ ಜನಸಂಖ್ಯೆಯಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಹೆಚ್ಚಿದ್ದು, ಅವರಿಗೂ ಶೆ.16 ರಷ್ಟು ಮೀಸಲಾತಿ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

Kn_hbl_05_horatti_avb_7208089
ವೀರಶೈವ ಲಿಂಗಾಯತ ಸಮುದಾಯಕ್ಕೆ ಶೆ.16 ರಷ್ಟು ಮೀಸಲಾತಿ ನೀಡಬೇಕು: ಬಸವರಾಜ ಹೊರಟ್ಟಿ ಆಗ್ರಹ

By

Published : Jan 9, 2020, 3:13 PM IST

ಹುಬ್ಬಳ್ಳಿ:ರಾಜ್ಯದ ಜನಸಂಖ್ಯೆಯಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಹೆಚ್ಚಿದ್ದು, ಅವರಿಗೂ ಶೆ.16 ರಷ್ಟು ಮೀಸಲಾತಿ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯಕ್ಕೆ ಶೆ.16 ರಷ್ಟು ಮೀಸಲಾತಿ ನೀಡಬೇಕು: ಬಸವರಾಜ ಹೊರಟ್ಟಿ ಆಗ್ರಹ

ಎಲ್ಲ ಸಮಾಜದವರು ಮೀಸಲಾತಿ ಕೇಳುತ್ತಿದ್ದಾರೆ. ಆ ಪ್ರಕಾರ ಅನೇಕ ಸಮುದಾಯದವರಿಗೆ ವಿವಿಧ ರಾಜ್ಯಗಳಲ್ಲಿ ಮೀಸಲಾತಿ ಕೊಡಲಾಗಿದೆ. ಅದರಂತೆ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಜನರ ಸಂಖ್ಯೆ ಹೆಚ್ಚಿದ್ದು, ಅವರಲ್ಲಿ ಅನೇಕರು ಬಡ ಜನರಿದ್ದಾರೆ. ಆ ಸಮಾಜದಲ್ಲಿಯೂ ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಹೀಗಾಗಿ ವೀರಶೈವ ಲಿಂಗಾಯತ ಸಮಾಜಕ್ಕೂ ಶೇ.16 ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದರು. ವೀರಶೈವ ಲಿಂಗಾಯತ ಮೀಸಲಾತಿ ವಿಚಾರವಾಗಿ ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲು ಪತ್ರ ಬರೆದಿದ್ದೆ. ಅಲ್ಲದೇ ಈಗ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದು, ಅವರಿಗೂ ಕೂಡಾ ಪತ್ರ ಬರೆದು ಮೀಸಲಾತಿ ಕಲ್ಪಿಸುವಂತೆ ಒತ್ತಾಯ ಮಾಡಲಾಗುವುದು‌. ಅದರಂತೆ ಜ.19 ರಂದು ಸಮಾಜದ ಮುಖಂಡರೊಂದಿಗೆ ಸಭೆ ನಡೆಸಲಾಗುವುದು ಎಂದರು.

ABOUT THE AUTHOR

...view details