ಧಾರವಾಡ:ಕೇಂದ್ರ ಗೃಹಮಂತ್ರಿಗಳನ್ನು ಭೇಟಿಯಾಗಿದ್ದೇನೆ. ಸಭಾಪತಿ ಆಗಿರುವುದರಿಂದ ಬೇರೆ ಪಕ್ಷದ ಬಗ್ಗೆ ಮಾತಾಡಲು ಬರುವುದಿಲ್ಲ. ಮೇ. 11ನೇ ತಾರೀಖಿನಂದು ಸಂಜೆ ಸಭಾಪತಿ ಸ್ಥಾನಕ್ಕೆ ಹಾಗೂ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಬಳಿಕ ಮುಂದಿನ ನಡೆಯ ಬಗ್ಗೆ ತಿಳಿಸುತ್ತೇನೆ ಎಂದು ಬಸವರಾಜ ಹೊರಟ್ಟಿ ಹೇಳಿದರು.
ಮೇ11 ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ: ಹೊರಟ್ಟಿ
ಸಭಾಪತಿ ಸ್ಥಾನ ಹಾಗೂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮುಂದಿನ ನಡೆ ತಿಳಿಸುತ್ತೇನೆ- ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
ಅಮಿತ್ ಶಾ ಅವರು ನನ್ನ ಬಗ್ಗೆ ಕೇಳಿದರು. ಒಳ್ಳೆ ಹೆಸರು ಇಟ್ಟುಕೊಂಡಿದ್ದೀರಿ, ಭೇಟಿಯಾಗಿದ್ದು ಖುಷಿಯಾಗಿದೆ ಎಂದರು. ಟಿಕೆಟ್ ಕುರಿತು ಪಕ್ಷಕ್ಕೆ ಸೇರಿದ ಮೇಲೆ ವಿಚಾರ ಮಾಡುವೆ, ಈಗಲೇ ಸೇರಿಲ್ಲ. 11ನೇ ತಾರೀಖಿನವರೆಗೂ ಯಾವುದೇ ರಾಜಕೀಯ ವಿಚಾರ ಮಾತನಾಡಲ್ಲ ಎಂದರು.
ಇದನ್ನೂ ಓದಿ:ನಾನು ಬಿಜೆಪಿ ಸೇರುವುದು ಖಚಿತ, ಈಗಾಗಲೇ ವರಿಷ್ಠರ ಜೊತೆ ಮಾತುಕತೆಯಾಗಿದೆ: ಹೊರಟ್ಟಿ