ಧಾರವಾಡ :ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಬಸವ ಜಯಂತಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಕಲಾಭವನ ಮುಂಭಾಗದಲ್ಲಿರುವ ಬಸವೇಶ್ವರ ಮೂರ್ತಿಗೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ಬಸವ ಜಯಂತಿ, ರಂಜಾನ್ ಹಬ್ಬಕ್ಕೆ ಶುಭಕೋರಿದ ಸ್ವಾಮೀಜಿ
ಬಸವ ಜಯಂತಿ ಹಾಗೂ ರಂಜಾನ್ ಹಬ್ಬಕ್ಕೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಪೀಠಾಧಿಪತಿ ಶ್ರೀ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿಗಳು ಶುಭಕೋರಿದ್ದಾರೆ. ಮಠದ ಆವರಣದಲ್ಲಿ ಕೆಲವೇ ಕೆಲವು ಭಕ್ತರ ಸಮ್ಮುಖದಲ್ಲಿ ಬಸವ ಜಯಂತಿ ಆಚರಿಸಿದರು.
ಶ್ರೀಮಠದಲ್ಲಿ ಬಸವ ಜಯಂತಿ ಆಚರಣೆ.. ಬಳಿಕ ಮಾತನಾಡಿದ ಅವರು, ರಂಜಾನ್ ನಿಮಿತ್ತವಾಗಿ ಮುಸ್ಲಿಂ ಬಂಧುಗಳು ಮಠಕ್ಕೆ ಆಗಮಿಸಿ ಶುಭಾಶಯ ವಿನಿಮಯ ಮಾಡುವ ಸಂಪ್ರದಾಯವಿತ್ತು.
ಆದ್ರೀಗ ಕೋವಿಡ್ ಕಾರಣದಿಂದ ಮುಸ್ಲಿಂ ಬಾಂಧವರಿಗೆ ಇಲ್ಲಿಂದಲೇ ಶುಭ ಕೋರುತ್ತೇನೆ. ಕೊರೊನಾ ಸಂಕಷ್ಟ ಕಾಲದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು, ಆಹಾರ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ ಎಂದರು.
ಓದಿ:ಮೈಸೂರು: ಪುತ್ಥಳಿಗೆ ಮಾಸ್ಕ್ ಹಾಕಿ ಬಸವ ಜಯಂತಿ ಆಚರಣೆ