ಹುಬ್ಬಳ್ಳಿ:ಲಾಕ್ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ಭಾರತೀಯ ರೈಲ್ವೆ ಇಲಾಖೆಯು ಸಾರ್ವಜನಿಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಇಂದು ನೈರುತ್ಯ ರೈಲ್ವೆ ವಲಯದ ಬೆಂಗಳೂರು-ಬೆಳಗಾವಿ ಪ್ಯಾಸೆಂಜರ್ ರೈಲು ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ಸಂಚರಿಸಿತು.
ಲಾಕ್ಡೌನ್ ಬಳಿಕ ಹುಬ್ಬಳ್ಳಿಗೆ ಆಗಮಿಸಿದ ಬೆಂಗಳೂರು- ಬೆಳಗಾವಿ ಪ್ಯಾಸೆಂಜರ್ ರೈಲು - Lockdown down relaxation
ಲಾಕ್ಡೌನ್ ಸಡಿಲಿಕೆ ಬಳಿಕ ಇಂದು ಬೆಂಗಳೂರು-ಬೆಳಗಾವಿಯ ಪ್ಯಾಸೆಂಜರ್ ರೈಲು ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತ್ತು. ಬಳಿಕ ಎಲ್ಲರಿಗೂ ರೈಲ್ವೆ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆ ನಡೆಸಲಾಯಿತು
ಹುಬ್ಬಳ್ಳಿಗೆ ಆಗಮಿಸಿದ ಬೆಂಗಳೂರು-ಬೆಳಗಾವಿ ಪ್ಯಾಸೆಂಜರ್ ರೈಲು
ಬೆಂಗಳೂರಿನಿಂದ ಬೆಳಗಾವಿಗೆ ಸಂಚರಿಸು ರೈಲು ಸರಿಯಾಗಿ 3-45ಕ್ಕೆ ಹುಬ್ಬಳ್ಳಿಯ ನೈರುತ್ಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತು. ರೈಲಿನಲ್ಲಿ ಧಾರವಾಡ ಜಿಲ್ಲೆಯ 85 ಪ್ರಯಾಣಿಕರು ಸಂಚರಿಸಿದ್ದು, ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆ ಮಾಡಿ ನಿರ್ಗಮಿಸಲು ಅವಕಾಶ ಕಲ್ಪಿಸಲಾಯಿತು.
ರೈಲಿನಲ್ಲಿ ಒಂದು ಸೀಟಿನಲ್ಲಿ ಒಬ್ಬರೇ ಕುಳಿತು ಪ್ರಯಾಣಿಸಿದ್ದರು. ಆದರೆ, ಹುಬ್ಬಳ್ಳಿಗೆ ಆಗಮಿಸುತ್ತಿದ್ದಂತೆ ಸಾಮಾಜಿಕ ಅಂತರ ಮರೆತರು. ರೈಲ್ವೆ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಪ್ರಯಾಣಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿ ಹೇಳಿದರು.