ಹುಬ್ಬಳ್ಳಿ: ಬೆಳಗಾವಿಯಲ್ಲಿ ಎಂಇಎಸ್ ದುಂಡಾ ವರ್ತನೆ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ನಟ ನೆನಪಿರಲಿ ಪ್ರೇಮ್ ಒತ್ತಾಯಿಸಿದರು.
ರಾಜ್ಯದಲ್ಲಿ ಎಂಇಎಸ್ ಸಂಘಟನೆ ಬ್ಯಾನ್ ಆಗಬೇಕು: ನೆನಪಿರಲಿ ಪ್ರೇಮ್ - ಬೆಳಗಾವಿಯಲ್ಲಿ ಎಂಇಎಸ್ ಗುಂಡಾ ವರ್ತನೆ
Actor Prem insists to ban MES in Karnataka: ರಾಜ್ಯದಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಬಾಂಧವ್ಯದಿಂದ ಇದ್ದಾರೆ. ದುಂಡಾ ವರ್ತನೆಯಿಂದ ದೇಶದಲ್ಲಿ ಎಂಇಎಸ್ ಗೆ ಒಳ್ಳೆಯ ಹೆಸರು ಬರುವುದಿಲ್ಲ. ಎಂಇಎಸ್ ಉದ್ಧಟತನದ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಎಂಇಎಸ್ ಸಂಘಟನೆ ಬ್ಯಾನ್ ಮಾಡಬೇಕು ಎಂದು ನಟ ನೆನಪಿರಲಿ ಪ್ರೇಮ್ ಒತ್ತಾಯಿಸಿದರು.
ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ದುಂಡಾ ವರ್ತನೆಯಿಂದ ದೇಶದಲ್ಲಿ ಎಂಇಎಸ್ ಗೆ ಒಳ್ಳೆಯ ಹೆಸರು ಬರಲ್ಲ. ರಾಜ್ಯದಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಬಾಂಧವ್ಯದಿಂದ ಇದ್ದಾರೆ. ಆ ಬಾಂಧವ್ಯವನ್ನ ಹಾಳು ಮಾಡುವಂತಹ ಕೆಲಸಕ್ಕೆ ಎಂಇಎಸ್ ಕೈ ಹಾಕಬಾರದು. ಯಾವುದೇ ಸಂಘಟನೆಗಳಿರಲಿ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಮರಾಠಿ ಚಿತ್ರಗಳಿಗೂ ಹಾಗೂ ಹಿಂದಿ ಚಿತ್ರಗಳಿಗೂ ಅವಕಾಶ ನೀಡಲಾಗಿದೆ. ಎಂಇಎಸ್ ನವರು ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಎಂಇಎಸ್ ಬ್ಯಾನ್ ವಿಚಾರದಲ್ಲಿ ಸರ್ಕಾರದ ನಿಲುವು ಏನಿದೆಯೋ ಗೊತ್ತಿಲ್ಲ. ಆದ್ರೆ ಕನ್ನಡಿಗರ ಮೇಲಿನ ದಬ್ಬಾಳಿಕೆ ಸಹಿಸಲ್ಲ. ಕನ್ನಡ ಚಿತ್ರರಂಗ ಹೋರಾಟಕ್ಕಿಳಿದರೆ ನಮ್ಮವರಿಗೆ ತೊಂದರೆಯಾಗಲಿದೆ ಅನ್ನೋ ಹಿನ್ನೆಲೆ ಶಾಂತ ರೀತಿಯಿಂದ ಇದ್ದಾರೆ ಎಂದರು.