ಕರ್ನಾಟಕ

karnataka

ETV Bharat / city

ಅಧಿಕಾರ ಬಳಸಿ ಶ್ರೀ ರಾಮುಲು ಭೂಕಬಳಿಗೆ ಮಾಡಿದ್ದಾರೆ : ಎಸ್.ಆರ್.ಹಿರೇಮಠ ಆರೋಪ - S R Hiremath complaint

ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಬಳ್ಳಾರಿಯಲ್ಲಿ 27 ಎಕರೆಯಷ್ಟು ಭೂಮಿಯನ್ನು ಶ್ರೀರಾಮುಲು ಅವರು ಕಬಳಿಸಿದ್ದಾರೆ ಎಂದು ಎಸ್​. ಆರ್​. ಹಿರೇಮಠ ಅವರು ದೂರಿದ್ದಾರೆ..

B Sriramulu Illegal land use in Ballari S R Hiremath complaint
ಎಸ್.ಆರ್.ಹಿರೇಮಠ ಆರೋಪ

By

Published : May 13, 2022, 4:51 PM IST

ಹುಬ್ಬಳ್ಳಿ :ಸಚಿವ ಬಿ.ಶ್ರೀರಾಮುಲು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಬೆಲೆ ಬಾಳುವ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ. ಕೂಡಲೇ ಅವರು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಚಿತ್ರದುರ್ಗ ಮೊಳಕಾಲ್ಮುರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು 27.25 ಎಕರೆ ಭೂ ಹಗರಣದಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಬಳ್ಳಾರಿಯ ಬೆಲೆ ಬಾಳುವ ಭೂಮಿಯನ್ನು ಕಬಳಿಸಿದ್ದಾರೆ.

ಈ ಬಗ್ಗೆ ಮಹತ್ವದ ದಾಖಲೆಗಳನ್ನು ನ್ಯಾಷನಲ್ ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ನ್ಯಾಚುರಲ್ ರಿಸೋರಿಸಸ್ (NCPNR) ಜನ ಸಂಗ್ರಾಮ ಪರಿಷತ್ ಹಾಗೂ ಸಮಾನ ಮನಸ್ಕ ಸಂಘಟನೆಗಳು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿವೆ. ಈ ಕೂಡಲೇ ಬಿ.ಶ್ರೀರಾಮುಲು ನೈತಿಕ ಹೊಣೆ ಹೊತ್ತು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಬೇಕೆಂದು ಎಸ್.ಆರ್.ಹಿರೇಮಠ ಒತ್ತಾಯಿಸಿದರು.

ಗಣಿ ಬಾಧಿತ ವಲಯ ಸಮಗ್ರ ಪರಿಸರ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಲು ಹಾಗೂ ಉಸ್ತುವಾರಿಯಾಗಿ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಬಿ.ಸುದರ್ಶನ ರೆಡ್ಡಿ ಅವರನ್ನು ನೇಮಕ ಮಾಡಲು ಸುಪ್ರೀಂಕೋರ್ಟ್ ಏ.21ರಂದು ಆದೇಶ ನೀಡಿದೆ. ಇದನ್ನು ಸಮಾಜ ಪರಿವರ್ತನಾ ಸಮುದಾಯ ಸ್ವಾಗತಿಸುತ್ತದೆ ಎಂದು ಹಿರೇಮಠ ತಿಳಿಸಿದರು.

ಇದನ್ನೂ ಓದಿ:ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗ ಪಡಿಸುವಂತಿಲ್ಲ, ರಮ್ಯಾ ಅಶಿಸ್ತು ತೋರಿದ್ದಾರೆ: ಆರ್​. ಧ್ರುವ ನಾರಾಯಣ್

For All Latest Updates

ABOUT THE AUTHOR

...view details