ಕರ್ನಾಟಕ

karnataka

ETV Bharat / city

ಉಸಿರಾಟದ ತೊಂದರೆ, ಜ್ವರಕ್ಕೆ ಆಯುಷ್ ವೈದ್ಯರು ಚಿಕಿತ್ಸೆ ನೀಡಬಾರದು: ಡಿಸಿ ದೀಪಾ ಚೋಳನ್​​ ಸೂಚನೆ - AYUSH doctors should not treat shortness of breath, fever

ಸಾಂಕ್ರಾಮಿಕ ರೋಗ ತಡೆ ಕಾಯ್ದೆ -1897ರ ಪ್ರಕಾರ ಕರ್ತವ್ಯಲೋಪ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ayush-doctors-should-not-treat-shortness-of-breath-fever-dc-deepa-cholan
ಉಸಿರಾಟದ ತೊಂದರೆ, ಜ್ವರಕ್ಕೆ ಆಯುಷ್ ವೈದ್ಯರು ಚಿಕಿತ್ಸೆ ನೀಡಬಾರದು: ಡಿಸಿ ದೀಪಾ ಚೋಳನ್ ಸೂಚನೆ

By

Published : Apr 14, 2020, 8:26 PM IST

ಧಾರವಾಡ: ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಲ್ಲಾ ಹೋಮಿಯೋಪತಿ, ಆಯುರ್ವೇದ ಮತ್ತು ಯುನಾನಿ ಚಿಕಿತ್ಸಾಲಯಗಳು ತೀವ್ರವಾದ ಉಸಿರಾಟದ ತೊಂದರೆ, ಶೀತಜ್ವರ ಪ್ರಕರಣಗಳಿಗೆ ಚಿಕಿತ್ಸೆ ನೀಡಬಾರದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.

ಎಸ್ಎಆರ್​​ಐ (ತೀವ್ರವಾದ ಉಸಿರಾಟದ ತೊಂದರೆ) ಮತ್ತು ಐಎಲ್ಐ (ಅನಾರೋಗ್ಯದಂತಹ ಶೀತಜ್ವರ) ಪ್ರಕರಣಗಳಿಗೆ ಚಿಕಿತ್ಸೆ ನೀಡಬಾರದು ಮತ್ತು ಅವರು ಈ ಪ್ರಕರಣಗಳ ಬಗ್ಗೆ ತಕ್ಷಣವೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ. ಇಂತಹ ಪ್ರಕರಣಗಳ ಕುರಿತು ವರದಿ ಮಾಡದೇ ನಿರ್ಲಕ್ಷ್ಯ ತೋರಿದರೆ ಗಂಭೀರವಾಗಿ ಪರಿಗಣಿಸಲಾಗುತ್ತದೆ.

ಸಾಂಕ್ರಾಮಿಕ ರೋಗ ತಡೆ ಕಾಯ್ದೆ -1897ರ ಪ್ರಕಾರ ಕರ್ತವ್ಯಲೋಪ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details