ಭಿಕ್ಷಾಟನೆ ನಿರತ ಮಕ್ಕಳು-ತಾಯಂದಿರಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಜಾಗೃತಿ - Dharwad District Child Protection Unit
ಧಾರವಾಡ ನಗರದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳು ಮತ್ತು ತಾಯಂದಿರನ್ನು ಗುರುತಿಸಿ ಭಿಕ್ಷಾಟನೆ ಮಾಡದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅರಿವು ಮೂಡಿಸಲಾಯಿತು.
ಧಾರವಾಡ:ಲಾಕ್‍ಡೌನ್ ಆಗಿದ್ದರೂ ಸಹ ಜಿಲ್ಲೆಯಲ್ಲಿ ಕಳೆದ 2 ತಿಂಗಳಲ್ಲಿ ಭಿಕ್ಷಾಟನೆ ನಿರತವಾಗಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲೆ, ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳು ಮತ್ತು ತಾಯಂದಿರನ್ನು ಗುರುತಿಸಿ ಭಿಕ್ಷಾಟನೆ ಮಾಡದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅರಿವು ಮೂಡಿಸಲಾಯಿತು.
ನಗರದ ಸಿಬಿಟಿ, ಹಳೇ ಬಸ್ ನಿಲ್ದಾಣ, ಗಾಂಧಿ ಚೌಕ, ಸುಭಾಷ್ ರಸ್ತೆ, ತರಕಾರಿ ಮಾರ್ಕೆಟ್, ಶಿವಾಜಿ ಸರ್ಕಲ್, ಟಿಕಾರೆ ರಸ್ತೆ, ಪ್ರದೇಶಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳು ಮತ್ತು ತಾಯಂದಿರನ್ನು ಗುರುತಿಸಿ ಭಿಕ್ಷಾಟನೆ ಮಾಡದಂತೆ ತಿಳಿಸಲಾಯಿತು.
ಕೊರೊನಾ ಮಾರಕ ರೋಗದಿಂದ ಜಗತ್ತು ತತ್ತರಿಸಿರುವ ಸಂದರ್ಭದಲ್ಲಿ ಪ್ರತಿಯೊಬ್ಬರು ತುಂಬಾ ಜಾಗರೂಕತೆಯಿಂದ ನಿತ್ಯ ಜೀವನದಲ್ಲಿ ಸಾಗಬೇಕಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದರಿಂದ ಕೊರೊನಾ ತಡೆಗಟ್ಟಬಹುದು ಎಂದರು.
ಅಲ್ಲದೆ ಮಕ್ಕಳ ರಕ್ಷಣಾ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿ ಭಿತ್ತಿ ಪತ್ರಗಳನ್ನು ಹಂಚುವುದರ ಮೂಲಕ ಜಾಗೃತಿ ಮೂಡಿಸಲಾಯಿತು.