ಕರ್ನಾಟಕ

karnataka

ETV Bharat / city

'ಅನಾಥ ರಸ್ತೆ' ಎಂಬ ನಾಮ ಫಲಕ ಹಿಡಿದು ಆಟೋ ಚಾಲಕರ ಪ್ರತಿಭಟನೆ.. - Auto drivers protest demanding road repair in Hubli

ಇತ್ತೀಚೆಗೆ ಸುರಿದ ಮಳೆಯಿಂದ ನಗರದ ರಸ್ತೆಗಳ ಮಧ್ಯೆದಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿದ್ದು, ಕೂಡಲೇ ‌ರಸ್ತೆಗಳ ದುರಸ್ತಿ ಮಾಡಬೇಕು ಎಂದು ಆಟೋರಿಕ್ಷಾ ಮಾಲೀಕ ಹಾಗೂ ಚಾಲಕರ ಸಂಘಟನೆಯ ಕಾರ್ಯಕರ್ತರು 'ಅನಾಥ ರಸ್ತೆ' ಎಂಬ ನಾಮ ಫಲಕ ಹಿಡಿದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.

ಆಟೋ ಚಾಲಕರ ಪ್ರತಿಭಟನೆ

By

Published : Oct 14, 2019, 8:21 PM IST

ಹುಬ್ಬಳ್ಳಿ: ನಗರದಲ್ಲಿ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ‌ರಸ್ತೆಗಳ ದುರಸ್ತಿ ಮಾಡಬೇಕು ಎಂದು ಆಟೋರಿಕ್ಷಾ ಮಾಲೀಕ ಹಾಗೂ ಚಾಲಕರ ಸಂಘಟನೆಯ ಕಾರ್ಯಕರ್ತರು 'ಅನಾಥ ರಸ್ತೆ' ಎಂಬ ನಾಮ ಫಲಕಕ್ಕೆ ಪೂಜೆ ಮಾಡಿ ಪ್ರತಿಭಟನೆ ಮಾಡಿದರು.

'ಅನಾಥ ರಸ್ತೆ' ಎಂಬ ನಾಮ ಫಲಕ ಹಿಡಿದು ಆಟೋ ಚಾಲಕರ ಪ್ರತಿಭಟನೆ

ಇತ್ತೀಚೆಗೆ ಸುರಿದ ಮಳೆಯಿಂದ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ರಸ್ತೆಯ ಮಧ್ಯೆದಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಇಲ್ಲಿನ ನಿರಂಜನ್ ರಸ್ತೆ, ಚೆನ್ನಮ್ಮ ವೃತ್ತದಲ್ಲಿರುವ ಗುಂಡಿಗಳ ನಡುವೆ ವಾಹನ ಸವಾರರು ಎದ್ದು ಬಿದ್ದು ಸಂಚರಿಸುತ್ತಿದ್ದಾರೆ. ಇದೇ ರಸ್ತೆಯಲ್ಲಿ ಖುದ್ದು ಅಧಿಕಾರಿಗಳು, ಜನ ಪ್ರತಿನಿಧಿಗಳೇ ಓಡಾಟ ನಡೆಸುತ್ತಾರೆ. ಆದರೆ, ಗುಂಡಿಗಳನ್ನ ಮುಚ್ಚುವ ಕಾರ್ಯ ಮಾತ್ರ ನಡೆದಿಲ್ಲ, ಪಾಲಿಕೆ ಈ ಬಗ್ಗೆ ಕ್ಯಾರೇ ಅನ್ನುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮಳೆಯಿಂದ ಕೆಸರು ಗದ್ದೆಯಂತೆ ಆಗಿದ್ದ ರಸ್ತೆಗಳೀಗ ಧೂಳುಮಯವಾಗಿವೆ. ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಜನಗಳ ಕಷ್ಟವನ್ನು ಅರ್ಥ ಮಾಡಿಕೊಂಡು ಉತ್ತಮ ರಸ್ತೆಗಳ ನಿರ್ಮಾಣ ಮಾಡಿ ಜನಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ABOUT THE AUTHOR

...view details