ಕರ್ನಾಟಕ

karnataka

ETV Bharat / city

ಸಹಾಯಧನದ ಅರ್ಜಿ ದಿನಾಂಕ ಮುಂದೂಡುವಂತೆ ಆಟೋ ಚಾಲಕರ ಪ್ರತಿಭಟನೆ - ಹುಬ್ಬಳ್ಳಿ ಧಾರವಾಡ ಸುದ್ದಿ

ಲಾಕ್​ಡೌನ್​ ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವಂತೆ ಹುಬ್ಬಳ್ಳಿ ನಗರದಲ್ಲಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘಟನೆಯ ಕಾರ್ಯಕರ್ತರು ತಹಶೀಲ್ದಾರ್​ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

auto-driver-protest-in-hubli
ಆಟೋ ಚಾಲಕರ ಪ್ರತಿಭಟನೆ

By

Published : Jul 13, 2020, 7:59 PM IST

ಹುಬ್ಬಳ್ಳಿ: ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವಂತೆ ಆಟೋ ಚಾಲಕರು ಹಾಗೂ ಮಾಲೀಕರ ಸಂಘಟನೆಯ ಕಾರ್ಯಕರ್ತರು ನಗರದ ತಹಶೀಲ್ದಾರ್​ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದರು.

ಸಹಾಯಧನದ ಅರ್ಜಿ ದಿನಾಂಕ ಮುಂದೂಡುವಂತೆ ಆಟೋ ಚಾಲಕರ ಪ್ರತಿಭಟನೆ

ಲಾಕ್ ಡೌನ್ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಆಟೋ ರಿಕ್ಷಾ ಚಾಲಕರಿಗೆ ರಾಜ್ಯ ಸರಕಾರ 5000 ರೂ. ಸಹಾಯಧನ ಬಿಡುಗಡೆ ಮಾಡಿದೆ. ಆದರೆ ಅವಳಿ ನಗರದಲ್ಲಿ 25,000 ಕ್ಕೂ ಹೆಚ್ಚು ಆಟೋ ರಿಕ್ಷಾ ಚಾಲಕರು ಇರುವ ಕಾರಣ ಅರ್ಜಿ ದಿನಾಂಕವನ್ನು ವಿಸ್ತರಿಸುವಂತೆ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದರು.

ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ ಎಂದು ಆದೇಶ ಮಾಡಿದ್ದು ಖಂಡನೀಯ. ಸರ್ಕಾರ ಹಣ ಬಿಡುಗಡೆ ಮಾಡುತ್ತದೆ ಎಂಬ ನಂಬಿಕೆಯನ್ನು ಹುಸಿಗೊಳಿಸಿದೆ. ಸದ್ಯಕ್ಕೆ 200 ರಿಂದ 300 ಆಟೋ ಚಾಲಕರಿಗೆ ಮಾತ್ರ ಹಣ ಬಂದಿದೆ. ಹೀಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಮುಂದಿನ ತಿಂಗಳವರೆಗೂ ವಿಸ್ತರಿಸುವಂತೆ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ABOUT THE AUTHOR

...view details