ಹುಬ್ಬಳ್ಳಿ:ಕೊರಚ, ಕೊರಮ, ಭಜಂತ್ರಿ, ಭೋವಿವಡ್ಡರ, ಲಂಬಾಣಿ ಜನಾಂಗವನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಬೇಕು ಎಂಬ ಹುನ್ನಾರ ನಡೆದಿದೆ. ಇದನ್ನು ಖಂಡಿಸಿ ಜೂನ್10ರಂದು ರಾಜ್ಯಾದ್ಯಂತ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಪಾಂಡುರಂಗ ಪಮ್ಮಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಎಸ್ಸಿ ಪಟ್ಟಿಯಿಂದ ಕೆಲ ಜನಾಂಗಗಳನ್ನು ಕೈಬಿಡುವ ಹುನ್ನಾರ.. ರಾಜ್ಯಾದ್ಯಂತ ಪತ್ರ ಚಳವಳಿ!! - ಪರಿಶಿಷ್ಟ ಜಾತಿ
ಈ ಜನಾಂಗವನ್ನು ಎಸ್ಸಿ ಪಟ್ಟಿಯಿಂದ ಹೊರಗಿಡುವುದು ಅವರಿಗೆ ಮಾಡುತ್ತಿರುವ ಮಹಾ ಅನ್ಯಾಯ. ಸರ್ಕಾರ ಯಾವುದೇ ಕಾರಣಕ್ಕೂ ಎಸ್ಸಿ ಪಟ್ಟಿಯಿಂದ ಅವರನ್ನೆಲ್ಲ ಕೈಬಿಡಬಾರದು ಎಂದು ಎಚ್ಚರಿಕೆ.
sc st
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಈ ಜನಾಂಗಗಳನ್ನು ಎಸ್ಸಿ ಪಟ್ಟಿಯಿಂದ ಹೊರಗಿಡುವಂತೆ ಸದಾಶಿವ ವರದಿ ಜಾರಿ ಮಾಡಲು ಪ್ರಯತ್ನ ನಡೆಯುತ್ತಿದೆ ಎಂದರು.
ಈ ಜನಾಂಗವನ್ನು ಎಸ್ಸಿ ಪಟ್ಟಿಯಿಂದ ಹೊರಗಿಡುವುದು ಅವರಿಗೆ ಮಾಡುತ್ತಿರುವ ಮಹಾ ಅನ್ಯಾಯ. ಹೀಗಾಗಿ ಸರ್ಕಾರ ಯಾವುದೇ ಕಾರಣಕ್ಕೂ ಅವರನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡಬಾರದೆಂದು ಎಚ್ಚರಿಸಿದರು.