ಕರ್ನಾಟಕ

karnataka

ETV Bharat / city

ಜಮೀನು ವಿವಾದ: ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಲ್ಲೆ - ಧಾರವಾಡ ರಿಯಲ್ ಎಸ್ಟೇಟ್ ಉಧ್ಯಮಿ ಮೇಲೆ ಹಲ್ಲೆ

ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಬಿಜೆಪಿ ಮುಖಂಡ ನಾಗನಗೌಡ ನೀರಲಗಿ ಮೇಲೆ ಹಲ್ಲೆಯಾಗಿದೆ. ಬಿಜೆಪಿ ಮುಖಂಡ ಕುಮಾರ್​ ಪಾಟೀಲ್‌ ಎಂಬುವವರು ಕೊಡಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ನಾಗನಗೌಡ ಆರೋಪಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ವಿರುದ್ಧವೂ ಆರೋಪ ಮಾಡಿದ್ದಾರೆ.

attack on Dharwad real estate businessman
ರಿಯಲ್ ಎಸ್ಟೇಟ್ ಉಧ್ಯಮಿ ಮೇಲೆ ಹಲ್ಲೆ

By

Published : Jan 11, 2021, 4:48 PM IST

ಧಾರವಾಡ: ನಗರದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಲ್ಲೆ ನಡೆದ ಘಟನೆ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ರಿಯಲ್ ಎಸ್ಟೇಟ್ ಉಧ್ಯಮಿ ಮೇಲೆ ಹಲ್ಲೆ

ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಬಿಜೆಪಿ ಮುಖಂಡ ನಾಗನಗೌಡ ನೀರಲಗಿ ಮೇಲೆ ಹಲ್ಲೆಯಾಗಿದೆ. ಬಿಜೆಪಿ ಮುಖಂಡ ಕುಮಾರ್​ ಪಾಟೀಲ್‌ ಎಂಬುವವರು ಕೊಡಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ನಾಗನಗೌಡ ಆರೋಪಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ವಿರುದ್ಧವೂ ಆರೋಪ ಮಾಡಿದ್ದಾರೆ.

ಓದಿ-ಟ್ರಂಪ್​ ಟ್ವಿಟ್ಟರ್ ಖಾತೆ ರದ್ದತಿ ಹಿಂದಿದೆ ಭಾರತೀಯ ಮೂಲದ ಮಹಿಳೆಯ ಪಾತ್ರ

ಧಾರವಾಡದ ಸಾರಸ್ವತಪುರ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದೆ. ಗಾಯಾಳು ನಾಗನಗೌಡ ನೀರಲಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

"ಈ ಹಿಂದೆ ಕೂಡ ಮನೆಗೆ ಬಂದು ಬೆದರಿಕೆ ಹಾಕಿ ಹೋಗಿದ್ದರು. ಇಂದು ನಾಗನಗೌಡ ಕಚೇರಿಯಲ್ಲಿ ಇದ್ದಾಗ ಕುಮಾರ ಪಾಟೀಲ್ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡದಂತೆ ಜೀವ ಬೆದರಿಕೆ ಹಾಕಿದ್ದಾರೆ." ಎಂದು ಗಾಯಾಳು ನಾಗನಗೌಡ ಪತ್ನಿ ಕವಿತಾ ಆರೋಪಿಸಿದ್ದಾರೆ.

ABOUT THE AUTHOR

...view details