ಧಾರವಾಡ: ಗೋಕಾಕ್ದಲ್ಲಿ ಜೆಡಿಎಸ್‌ನಿಂದ ಅಶೋಕ್ ಪೂಜಾರಿ ಸ್ಪರ್ಧೆ ಮಾಡ್ತಾರೆ ಎಂಬ ಪ್ರಶ್ನೆ ಮೂಡಿತ್ತು. ಈ ಕುರಿತು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಪರೋಕ್ಷವಾಗಿ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, ಅಶೋಕ್ ಪೂಜಾರಿ ಚುನಾವಣೆಗೆ ಹೇಗಿದ್ರೂ ನಿಲ್ತಾರೆ. ಹೇಗೆ ನಿಲ್ಲುತ್ತಾರೋ ಗೊತ್ತಿಲ್ಲ, ಆದರೆ ಅವರು ಚುನಾವಣೆಗೆ ನಿಲ್ಲುವುದಂತೂ ಖಚಿತ. ಜೆಡಿಎಸ್ ಸೇರ್ಪಡೆಯ ನಿರೀಕ್ಷೆಯ ಬಗ್ಗೆ ನೀವೇ ವಿಚಾರ ಮಾಡಿ ಎಂದು ಮಾಧ್ಯಮಗಳಿಗೆ ಪ್ರಶ್ನೆ ಹಾಕಿದ್ದಾರೆ.ಈ ಮೂಲಕ ಪರೋಕ್ಷವಾಗಿ ಅಶೋಕ್ ಪೂಜಾರಿ ಜೆಡಿಎಸ್ ಸೇರಬಹುದು ಎನ್ನುವ ಸುಳಿವನ್ನು ಜೆಡಿಎಸ್ ನಾಯಕ ಬಿಟ್ಟು ಕೊಟ್ಟಿದ್ದಾರೆ.
ಇಂದಿನ ರಾಜಕೀಯ ವಾತಾವರಣ ಸರಿಯಿಲ್ಲ, ಸಿದ್ಧಾಂತದ ರಾಜಕೀಯ ಯಾವ ಪಕ್ಷದಲ್ಲೂ ಕಾಣಿಸುತ್ತಿಲ್ಲ. ರಾಜಕಾರಣಿಗಳಲ್ಲಿ ವೈಯಕ್ತಿಕ ಹಿತಾಸಕ್ತಿ ಜಾಸ್ತಿಯಾಗಿದೆ. ಮೂರು ಪಕ್ಷದಲ್ಲೂ ಆಂತರಿಕ ಕಲಹ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ ಎಂದು ಪ್ರಸಕ್ತ ರಾಜಕೀಯ ವಿದ್ಯಮಾನದ ಬಗ್ಗೆ ಅಸಮಾಧಾನ ಹೊರ ಹಾಕಿದರು.
ರಾಜ್ಯ ನೆರೆಗೆ ತುತ್ತಾಗಿ ಸಂಕಷ್ಟದಲ್ಲಿರುವ ಕಾರಣ ಎಚ್ಡಿಕೆ ಮತ್ತು ದೇವೇಗೌಡರು ಸರ್ಕಾರ ಉಳಿಸುವ ಮಾತು ಹೇಳಿದ್ದಾರೆ. ಚುನಾವಣೆ ಖರ್ಚು ಬೇಡ, ಇರುವ ಸರ್ಕಾರವೇ ಇರಲಿ ಅಂತ ಬೆಂಬಲದ ಮಾತಾಡಿದ್ದಾರೆ. ಎಲ್ಲ ಪಕ್ಷದವರೂ ತಮಗೆ ಹೇಗೆ ಬೇಕೋ ಹಾಗೆ ಹೊಂದಾಣಿಕೆ ಮಾಡಿಕೊಳ್ಳತ್ತಾ ಇದ್ದಾರೆ ಎಂದರು.