ಕರ್ನಾಟಕ

karnataka

ETV Bharat / city

ನಕಲಿ ನೋಟು ಚಲಾವಣೆ: 1.05 ಲಕ್ಷ ನಗದು ಸಮೇತ ಆರೋಪಿ ಅರೆಸ್ಟ್​ - accused Arrest news

ಸಾರ್ವಜನಿಕರಿಗೆ ನಕಲಿ ನೋಟುಗಳನ್ನು ಅಸಲಿ ನೋಟುಗಳೆಂದು ನಂಬಿಸಿ ಚಲಾವಣೆ ಮಾಡುತ್ತಿದ್ದ ಆರೋಪಿಯನ್ನು ಹುಬ್ಬಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Arrest
Arrest

By

Published : Aug 16, 2021, 12:29 PM IST

ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದ ಪಾರ್ಕ್‌ ಬಳಿ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಆರೋಪಿಯನ್ನು ರೈಲ್ವೆ ಠಾಣೆ ಪೊಲೀಸರು ಬಂಧಿಸಿ, 1.05 ಲಕ್ಷ ರೂ. ಮೌಲ್ಯದ 210 ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಕುಂದಗೋಳ ತಾಲೂಕು ಮಳಲಿ ಗ್ರಾಮದ ಹರೀಶ ಎಂ.ಭೋವಿ ಬಂಧಿತ ಆರೋಪಿ. ಈತ ಸಾರ್ವಜನಿಕರಿಗೆ ನಕಲಿ ನೋಟುಗಳನ್ನು ಅಸಲಿ ನೋಟುಗಳೆಂದು ನಂಬಿಸಿ ಚಲಾವಣೆ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ರೈಲ್ವೆ ಪೊಲೀಸ್ ಠಾಣೆ ಪಿಎಸ್‌ಐ ಸತ್ಯಪ್ಪ ಮುಕ್ಕಣ್ಣವರ ಅವರು ಹರೀಶನನ್ನು ವಶಕ್ಕೆ ಪಡೆದು, ತಪಾಸಣೆ ನಡೆಸಿದಾಗ ಆತನ ಬಳಿ 500 ರೂ. ಮುಖಬೆಲೆಯ ಒಟ್ಟು 210 ನಕಲಿ ನೋಟುಗಳು ಸಿಕ್ಕಿವೆ. ಕೂಡಲೇ ಆತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಇನ್ನು ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಯಲ್ಲಪ್ಪ ತಳವಾರ, ರಮೇಶ ಲಮಾಣಿ, ಸುಭಾಷ್​​ ದಳವಾಯಿ, ವೀರಪ್ಪ ಅಗಡಿ, ಮಾಳಪ್ಪ ಪೂಜಾರಿ ಪಾಲ್ಗೊಂಡಿದ್ದರು. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details