ಹುಬ್ಬಳ್ಳಿ: ಕಡಿಮೆ ದರಕ್ಕೆ ನಿವೇಶನ ಹಾಗೂ ಹಣ ದ್ವಿಗುಗೊಳಿಸಿ ಕೊಡುವುದಾಗಿ ನಂಬಿಸಿ ಸಾವಿರಾರು ಜನರಿಗೆ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿ ತಲೆಮರೆಸಿಕೊಂಡಿದ್ದ ವಂಚಕನನ್ನ ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಣ ಡಬ್ಬಲ್, ಸೈಟ್ ಆಸೆ ತೋರಿಸಿ ನೂರಾರು ಕೋಟಿ ನಾಮ ಹಾಕಿದ್ದವರ ಬಂಧನ - Hubli Police
ಹಣ ಡಬ್ಬಲ್, ಸೈಟ್ ಆಸೆ ತೋರಿಸಿ ಜನಕ್ಕೆ ನೂರಾರು ಕೋಟಿ ನಾಮ ಹಾಕಿದ್ದವರ ಬಂಧಿಸುವಲ್ಲಿ ಹುಬ್ಬಳ್ಳಿಯ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
![ಹಣ ಡಬ್ಬಲ್, ಸೈಟ್ ಆಸೆ ತೋರಿಸಿ ನೂರಾರು ಕೋಟಿ ನಾಮ ಹಾಕಿದ್ದವರ ಬಂಧನ Arrest of two persons in Hubli](https://etvbharatimages.akamaized.net/etvbharat/prod-images/768-512-10032555-thumbnail-3x2-vish.jpg)
ಹುಬ್ಬಳ್ಳಿಯಲ್ಲಿ ಇಬ್ಬರ ಬಂಧನ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಸಾತಿಹಾಳ ಗ್ರಾಮದ ರಾಮಯ್ಯ ಗಂಗಯ್ಯ ಹಿರೇಮಠ ಎನ್ನುವವರೇ ಅರೋಪಿಗಳು. ವಂಚಕರು ದೇಶಪಾಂಡೆ ನಗರದಲ್ಲಿ ಗರೀಮಾ ಹೋಮ್ಸ್ ಆ್ಯಂಡ್ ಫಾರ್ಮ್ ಹೌಸ್ ಲಿಮಿಟೆಡ್ ಹೆಸರಿನಲ್ಲಿ ಕಚೇರಿ ಮಾಡಿಕೊಂಡಿದ್ದರು. ಕಮೀಷನ್ ಆಧಾರದಲ್ಲಿಯೂ ಹಣ ನೀಡಿ ನಂತರ ಜಾಗ, ಮನೆ ನೀಡುವುದಾಗಿ ಮೋಸ ಮಾಡಿದ್ದರು.
ಗರೀಮಾ ಕಂಪನಿ ರಾಜಸ್ಥಾನ ಮೂಲದ ಬಿಜೆಪಿ ಶಾಸಕಿ ಶೋಭಾರಾಣಿಯದು ಎನ್ನಲಾಗಿದೆ. ಈ ಕಂಪನಿ ಹುಬ್ಬಳ್ಳಿ- ಧಾರವಾಡ ದಾಂಡೇಲಿ, ಯಾದಗಿರಿ, ರಾಯಚೂರು ಸೇರಿದಂತೆ ವಿವಿಧೆಡೆ ನೂರಾರು ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ.