ಧಾರವಾಡ: ಒಂದೇ ಸಹಿ ಸಂಗ್ರಹ ಆಗಿತ್ತು. ಅದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದು ಮಾತ್ರ. ಸದನ ನಡೆದಾಗ ಸಹಿ ಮಾಡಿದ್ದೆವು ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಶಾಸಕ ಅರವಿಂದ ಬೆಲ್ಲದ್ ಪರೋಕ್ಷವಾಗಿ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಟಾಂಗ್ ನೀಡಿದರು.
ರೇಣುಕಾಚಾರ್ಯ ಹೇಳಿಕೆ ವಿಚಾರ: ಯಾರ ಬಗ್ಗೆಯೂ ವೈಯಕ್ತಿಕ ಪ್ರತಿಕ್ರಿಯೆ ಕೊಡಲಾರೆ ಎಂದ ಬೆಲ್ಲದ್
ಒಂದೇ ಸಹಿ ಸಂಗ್ರಹ ಆಗಿತ್ತು, ಅದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದು ಮಾತ್ರ. ಸದನ ನಡೆದಾಗ ಸಹಿ ಮಾಡಿದ್ದೆವು. ಅದೇ ಕೊನೆ ಸಹಿ ಸಂಗ್ರಹ ನಮ್ಮಲ್ಲಿ ಆಗಿರೋದು ಎಂದು ಪರೋಕ್ಷವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ಸಹಿ ಸಂಗ್ರಹ ಹೇಳಿಕೆಗೆ ಶಾಸಕ ಅರವಿಂದ ಬೆಲ್ಲದ್ ಸ್ಪಷ್ಟನೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಆಗಿಲ್ಲ. ಒಂದೇ ಸಹಿ ಸಂಗ್ರಹ ಆಗಿತ್ತು, ಅದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದು ಮಾತ್ರ. ಸದನ ನಡೆದಾಗ ಸಹಿ ಮಾಡಿದ್ದೇವೆ. ಅದೇ ಕೊನೆ ಸಹಿ ಸಂಗ್ರಹ ನಮ್ಮಲ್ಲಿ ಆಗಿರೋದು ಎಂದು ಪರೋಕ್ಷವಾಗಿ ರೇಣುಕಾಚಾರ್ಯ ಸಹಿ ಸಂಗ್ರಹ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ನಮ್ಮದು ಶಿಸ್ತಿನ ಪಕ್ಷ. ಇಲ್ಲಿ ಸಹಿ ಸಂಗ್ರಹದಂತಹ ವಿಚಾರಗಳಿಗೆ ಅವಕಾಶ ಇಲ್ಲ. ಹಾಗೆ ಮಾಡಿದವರ ಮೇಲೆ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ. ಶಾಸಕಾಂಗ ಸಭೆಯಲ್ಲೇ ಏನೇ ಇದ್ದರೂ ಚರ್ಚೆ ಆಗುತ್ತದೆ. ನನ್ನ ಕ್ಷೇತ್ರದಲ್ಲಿ ಏನು ಮಾಡಬೇಕೋ ಅದನ್ನು ನಾನು ಮಾಡುತ್ತಿರುವೆ. ಅದ್ರೆ ರೇಣುಕಾಚಾರ್ಯ ಅವರ ಸವಾಲ್ ಬಗ್ಗೆ ಪ್ರತಿಕ್ರಿಯೆ ಕೊಡಲಾರೆ ಎಂದರು.