ಹುಬ್ಬಳ್ಳಿ:ಖಾಸಗಿ ಕಾರ್ಯಕ್ರಮಗಳನ್ನು ಎಂದಿನಂತೆ ನಡೆಸಲು ಅನುಮತಿ ನೀಡುವ ಮೂಲಕ ಶಾಮಿಯಾನ ಉದ್ಯಮ ನಡೆಸಲು ಅವಕಾಶ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ್ ಹಿರೇಮಠ ಸರ್ಕಾರವನ್ನು ಒತ್ತಾಯಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮದುವೆ ಕಾರ್ಯಕ್ರಮಗಳ ಸೀಜನ್ ಆಗಿರುವ ಕಾರಣ ಅಡುಗೆಯವರು, ಲೈಟಿಂಗ್, ಶಾಮಿಯಾನ, ಫೋಟೋ, ವಿಡಿಯೋಗ್ರಾಫರ್, ಪುರೋಹಿತರು, ಮದುವೆ ಪತ್ರಿಕೆ ಪ್ರಿಂಟರ್ಸ್, ಮಾರಾಟಗಾರರು ಹಾಗೂ ಹೂವು ಮಾರುವವರು ಮದುವೆ ಸಮಾರಂಭಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಏಕಾಏಕಿ ಸಭೆ-ಸಮಾರಂಭಗಳಿಗೆ ನಿರ್ಬಂಧ ಹಾಕಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.