ಹುಬ್ಬಳ್ಳಿ: ದಿನದಿಂದ ದಿನಕ್ಕೆ ನೈರುತ್ಯ ರೈಲ್ವೆ ಅತ್ಯಾಧುನಿಕತೆ, ವಾಣಿಜ್ಯೋದ್ಯಮ ಹಾಗೂ ಕೈಗಾರಿಕಾ ಸ್ನೇಹಿಯಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಬೆಂಗಳೂರು ವಿಭಾಗದ ದೊಡ್ಡಬಳ್ಳಾಪುರ ನಿಲ್ದಾಣದಿಂದ ಚಂಡೀಗಢ ನಗರಕ್ಕೆ ಮೊಟ್ಟ ಮೊದಲ ಬಾರಿಗೆ 32 ಬಸ್ಗಳನ್ನ ರೈಲಿನ ಮೂಲಕ ಸಾಗಿಸಲಾಗಿದೆ.
ಹಿಮಾಚಲ ಪ್ರದೇಶ ರಾಜ್ಯ ಸಾರಿಗೆಯಲ್ಲಿ ಈ ಬಸ್ಗಳನ್ನ ಬಳಸಲಾಗುತ್ತದೆ. ಅಶೋಕ್ ಲೇಲ್ಯಾಂಡ್ ಬಸ್ಗಳಾಗಿವೆ. 2021-22 ರಲ್ಲಿ ನೈರುತ್ಯ ರೈಲ್ವೆ 238 ರೈಲುಗಳಲ್ಲಿ ಟೊಯೊಟಾ, ಕಿಯಾ ಕಾರುಗಳು, ಸುಜುಕಿ TVS ಸ್ಕೂಟರ್ಗಳನ್ನ ಭಾರತದ ವಿವಿಧ ಭಾಗಗಳಿಗೆ ಸಾಗಿಸಿತ್ತು.
ರೈಲು ಮೂಲಕ 32 ಬಸ್ಗಳ ಸಾಗಣೆ ಹೊಸದಾಗಿ ನಿರ್ಮಿಸಲಾದ ದ್ವಿಚಕ್ರ ಮತ್ತು 4 ಚಕ್ರದ ವಾಹನಗಳ ಸಾರಿಗೆಗೆ ಇತ್ತೀಚೆಗೆ ಅನೇಕ ಕಂಪನಿಗಳು ರೈಲ್ವೆಯನ್ನ ನೆಚ್ಚಿಕೊಂಡಿವೆ. ರೈಲಿನ ಮೂಲಕ ಸಾಗಾಣಿಕೆ ಮಾಡುವುದು ಸುರಕ್ಷಿತ, ಶೀಘ್ರ ಮತ್ತು ಸುಗಮ. ಅಲ್ಲದೇ, ರಸ್ತೆಯಲ್ಲಿ ಸಾಗಾಣಿಕೆ ಮಾಡುವುದಕ್ಕೆ ಹೋಲಿಸಿದ್ರೆ ಇಂಗಾಲದ ಹೊರಸೂಸುವಿಕೆ ಅತಿ ಕಡಿಮೆ. ಇದರಿಂದ ಪರಿಸರ ಮಾಲಿನ್ಯ ಕೂಡ ಕಡಿಮೆಯಾಗುತ್ತದೆ. ಈಗ ಟೊಯೊಟಾ, ಕಿಯಾ, ಸುಜುಕಿ ಕಂಪನಿಗಳ ಜೊತೆ ಅಶೋಕ್ ಲೇಲ್ಯಾಂಡ್ ವಾಹನಗಳನ್ನು ಸಾಗಿಸುತ್ತಿರುವುದಕ್ಕೆ ನೈರುತ್ಯ ರೈಲ್ವೆ ಇಲಾಖೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಮುಂಬೈ ಷೇರುಪೇಟೆಯಲ್ಲಿ ಕರಡಿ ಕುಣಿತ; ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,155 ಅಂಶ ಕುಸಿತ