ಕರ್ನಾಟಕ

karnataka

ETV Bharat / city

ನಿರಂತರ ಮಳೆಗೆ ಕುಸಿದುಬಿದ್ದ ಅಂಗನವಾಡಿ ಕಟ್ಟಡ: ತಪ್ಪಿದ ಅನಾಹುತ - Anganwadi building collapsed due to continuous rain in dharwad

ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಶಿವನಗರದಲ್ಲಿ ಭಾರಿ ಮಳೆಗೆ ಇಂದು ಬೆಳಗಿನ ಜಾವ ಅಂಗನವಾಡಿ ಕೇಂದ್ರ ಕುಸಿದು ಬಿದ್ದಿದೆ.

Anganwadi building collapsed
ಕುಸಿದುಬಿದ್ದ ಅಂಗನವಾಡಿ ಕಟ್ಟಡ

By

Published : Jul 22, 2022, 1:24 PM IST

ಧಾರವಾಡ: ನಿರಂತರ ಮಳೆಯಿಂದಾಗಿ ಶಿಥಿಲಾವಸ್ಥೆಯಲ್ಲಿದ್ದ ಅಂಗನವಾಡಿ ಕಟ್ಟಡವೊಂದು ಕುಸಿದು ಬಿದ್ದಿರುವ ಘಟನೆ ಜಿಲ್ಲೆಯ ಅಳ್ನಾವರ ತಾಲೂಕಿನ ಶಿವನಗರದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸುಮಾರು 40 ವರ್ಷ ಹಳೆಯದಾದ ಈ ಅಂಗನವಾಡಿ ಕಟ್ಟಡ ಮೊದಲೇ ಶಿಥಿಲಗೊಂಡಿತ್ತು. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಇಂದು ಏಕಾಏಕಿ ಕುಸಿದು ಬಿದ್ದಿದೆ. ಇಲ್ಲಿಗೆ ಸುಮಾರು 20 ಕ್ಕೂ ಹೆಚ್ಚು ಮಕ್ಕಳು ಬರುತ್ತಿದ್ದು, ಬೆಳಗಿನ ಜಾವ ಕಟ್ಟಡ ಕುಸಿದಿರುವುದರಿಂದ ಭಾರಿ ಅನಾಹುತ ತಪ್ಪಿದೆ.

ಶಿವನಗರದಲ್ಲಿ ಭಾರಿ ಮಳೆಗೆ ಕುಸಿದುಬಿದ್ದ ಅಂಗನವಾಡಿ ಕಟ್ಟಡ

"ಶಿಥಿಲಗೊಂಡ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಈ ಹಿಂದೆಯೇ ಸಾಕಷ್ಟು ಸಲ ಮನವಿ ಮಾಡಲಾಗಿದೆ. ಆದ್ರೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ" ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ: ಮನೆಗಳಿಗೆ ಹಾನಿ, ರಸ್ತೆಗಳು ಜಲಾವೃತ

ABOUT THE AUTHOR

...view details