ಹುಬ್ಬಳ್ಳಿ: ಕೊರೊನಾ ಹರಡುವಿಕೆ ತಡೆಗೆ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಹಾಗೂ ಯೋಧರಿಗೆ ನಗರದ ಕಲಾತಂಡವೊಂದು ದೇಶಭಕ್ತಿಗೀತೆ ನೃತ್ಯದ ಮೂಲಕ ಗೌರವ ಸಲ್ಲಿಸಿದೆ.
ದೇಶ ಭಕ್ತಿಗೀತೆ ಮೂಲಕ ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸಿದ ಕಲಾ ತಂಡ ಕೊರೊನಾ ವಿರುದ್ಧ ವೈದ್ಯರು, ಪೊಲೀಸರು, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ನಗರದ 'ಕಲಾ ಲೋಕ ಕಲ್ಚರಲ್ ಡಾನ್ಸ್' ಅಕಾಡೆಮಿ ಕಲಾವಿದರು ದೇಶಭಕ್ತಿ ಗೀತೆಯೊಂದನ್ನು ಚಿತ್ರೀಕರಿಸಿ ಗೌರವ ಸಲ್ಲಿಸಿದ್ದಾರೆ.
ಕೃಷ್ಣ ಕುಮಾರ್ ಎಂಬುವವರು ವೈದ್ಯರು, ಪೊಲೀಸ್, ಪೌರ ಕಾರ್ಮಿಕರಿಗೆ 'ವಂದನೆ ಅಭಿನಂದನೆ, ಹಗಲಿರುಳು ಎನ್ನದೇ ಶ್ರಮವಹಿಸುತ್ತಿರುವ ದೇಶ ಭಾಂದವರೇ..' ಎಂಬ ಗೀತೆ ರಚಿಸಿದ್ದಾರೆ. ಈ ಹಾಡಿಗೆ ಸಿದ್ದು ಬಾಕಳೆ ಎಂಬುವವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಸಹ ನಿರ್ದೇಶಕರಾಗಿ ತೇಜಸ್, ವಿನಾಯಕ ಹುಲಿಯಾಳ ಕಾರ್ಯನಿರ್ವಹಿಸಿದ್ದಾರೆ.
ನರಗದ ಚನ್ನಮ್ಮ ಸರ್ಕಲ್, ಸಿದ್ದಾರೂಢರ ಮಠ, ಮೂರು ಸಾವಿರ ಮಠ, ದುರ್ಗದ ಬೈಲ, ಜನತಾ ಬಜಾರ್, ನೃಪತುಂಗ ಬೆಟ್ಟ ಸೇರಿ ವಿವಿಧೆಡೆ ಈ ಹಾಡನ್ನು ಚಿತ್ರೀಕರಿಸಿದ್ದು, ಈ ಕಲಾತಂಡದ ದೇಶಭಕ್ತಿ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.