ಧಾರವಾಡ:ತಾಲೂಕಿನ ಅಮ್ಮಿನಬಾವಿ ಗ್ರಾಮದ ಪ್ರಕಾಶ ದೇಶದ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಪೊಲೀಸರು ಬಂಧಿಸಿದ್ದಾರೆ. ಸುರೇಶ ದೇಶದ, ಕಲ್ಲಪ್ಪ ದೇಶದ ಹಾಗೂ ವಾಸಪ್ಪ ದೇಶದ ಎಂಬುವವರು ಬಂಧಿತರು. ಜಮೀನಿನ ಕಾರಣಕ್ಕೆ ಮೇ 10ರಂದು ಪ್ರಕಾಶ ದೇಶದ ಅವರ ಕೊಲೆ ನಡೆದಿತ್ತು.
ಕೊಲೆಯಾದ ಪ್ರಕಾಶ ದೇಶದ, ಕೊಲೆ ಆರೋಪಿಗಳ ಸಂಬಂಧಿಯಾಗಿದ್ದರು. 5 ಎಕರೆ ಜಮೀನಿನಲ್ಲಿ ಉಳುಮೆ ವಿಚಾರಕ್ಕೆ ಇವರ ನಡುವೆ ಕಲಹವಾಗಿದೆ. ಈ ವಿಚಾರವಾಗಿ ಕೌಟುಂಬಿಕ ಕಲಹಗಳು ನಡೆಯುತ್ತಲೇ ಇತ್ತು.