ಕರ್ನಾಟಕ

karnataka

ETV Bharat / city

ಶಾ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಹಣ ಹಂಚಿಕೆ ಆರೋಪ: ವಿಡಿಯೋ ವೈರಲ್​​ - ಶನಿವಾರ ನಗರದ ನೆಹರೂ ಮೈದಾನದಲ್ಲಿ ಆಯೋಜನೆ

ಅಮಿತ್ ಶಾ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಬಿಜೆಪಿ ಮುಖಂಡರು ಹಣ ಹಾಗೂ ಸಾರಾಯಿ‌ ಹಂಚಿದ್ದಾರೆಂದು ವ್ಯಕ್ತಿಯೊಬ್ಬ ಹೇಳಿರುವ ವಿಡಿಯೋ ವೈರಲ್ ಆಗಿದೆ.

Kn_hbl_01_sha_program_viral_video_av_7208089
ಶಾ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಹಣ ಹಂಚಿಕೆ: ವಿಡಿಯೋ ವೈರಲ್...!

By

Published : Jan 20, 2020, 2:04 PM IST

ಹುಬ್ಬಳ್ಳಿ:ಅಮಿತ್ ಶಾ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಬಿಜೆಪಿ ಮುಖಂಡರು ಹಣ ಹಾಗೂ ಸಾರಾಯಿ‌ ಹಂಚಿದ್ದಾರೆಂದು ವ್ಯಕ್ತಿಯೊಬ್ಬ ಹೇಳಿರುವ ವಿಡಿಯೋ ವೈರಲ್ ಆಗಿದೆ.

ಶಾ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಹಣ ಹಂಚಿಕೆ ಆರೋಪ: ವಿಡಿಯೋ ವೈರಲ್
ಪೌರತ್ವ ಕಾಯ್ದೆ ಜನಜಾಗೃತಿ ಸಮಾವೇಶವನ್ನು ಶನಿವಾರ ನಗರದ ನೆಹರೂ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದರು. ಹೀಗಾಗಿ ಅವರ ಕಾರ್ಯಕ್ರಮಕ್ಕೆ ಜನರನ್ನು ಸೇರಿಲು ಹಣ ಹಾಗೂ ಸಾರಾಯಿ ಹಂಚಲಾಗಿದೆ ಎಂಬ ವಿಡಿಯೋ ‌ಈಗ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರತಿ ಹಳ್ಳಿಯಿಂದ ‌ಒಂದು ಟಾಟಾ‌ ಏಸ್, ಟ್ರ್ಯಾಕ್ಸ್ ಮಾಡಿಕೊಂಡು ಬಂದವರಿಗೆ ಬಿಜೆಪಿ ಮುಖಂಡರು 3 ಸಾವಿರ ಹಣ ಕೊಟ್ಟಿದ್ದಾರೆ. ತಲೆಗೆ ಒಂದು ನೂರು ರೂಪಾಯಿ ಹಂಚಿಕೊಳ್ಳಲಾಗಿದೆ ಎಂದು ವ್ಯಕ್ತಿಯೊಬ್ಬ ಹೇಳಿಕೊಂಡಿದ್ದಾನೆ. ಇದನ್ನು ಬೇರೊಬ್ಬ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಇದು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ.

ABOUT THE AUTHOR

...view details