ಕರ್ನಾಟಕ

karnataka

ETV Bharat / city

ಆಯುಷ್​ ವೈದ್ಯರ ಬೇಡಿಕೆ ಈಡೇರಿಸುವಂತೆ ಅಮನ್​ ಫೌಂಡೇಶನ್ ಮನವಿ - Doctors strike

‌ಸುಮಾರು 2 ಸಾವಿರ ವೈದ್ಯರು ಕೊರೊನಾ ಸೋಂಕು ಹರಡುವಿಕೆ ತಡೆಯುವಲ್ಲಿ ಹೋರಾಡುತ್ತಿದ್ದಾರೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಆಯುಷ್ ವೈದ್ಯರ ಬೇಡಿಕೆ ಈಡೇರಿಸಬೇಕು ಎಂದು ಸಚಿವರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.‌

Aman Foundation appeals that fulfill Ayush doctors demand
ಆಯುಷ್​ ವೈದ್ಯರ ಬೇಡಿಕೆ ಈಡೇರಿಸುವಂತೆ ಅಮನ್​ ಫೌಂಡೇಶನ್ ಮನವಿ

By

Published : Jul 20, 2020, 7:32 PM IST

ಹುಬ್ಬಳ್ಳಿ: ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರ ಬೇಡಿಕೆ ಈಡೇರಿಸುವಂತೆ ಅಮನ್ ಫೌಂಡೇಶನ್ ಅಧ್ಯಕ್ಷ ನವೀದ್ ಮುಲ್ಲಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್​ಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

‌ಸುಮಾರು 2 ಸಾವಿರ ವೈದ್ಯರು ಕೊರೊನಾ ಸೋಂಕು ಹರಡುವಿಕೆ ತಡೆಯುವಲ್ಲಿ, ಆಯಾ ಕ್ವಾರಂಟೈನ್ ಕೇಂದ್ರಗಳಲ್ಲಿ ಹಾಗೂ ಖಾಸಗಿಯಾಗಿಯೂ ಮುಂಚೂಣಿಯಲ್ಲಿ ನಿಂತು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು‌. ಅಲ್ಲದೇ ಜಿಲ್ಲೆಯ 4 ಕೋವಿಡ್ ಕೇರ್ ಸೆಂಟರ್​​​ಗಳನ್ನು ಸಹ ಆಯುರ್ವೇದ ಕಾಲೇಜುಗಳಲ್ಲಿಯೇ ತೆರೆಯಲಾಗಿದ್ದು ಇಲ್ಲಿಯೂ ಸೇವೆ ಸಲ್ಲಿಸುತ್ತಿದ್ದರು.

ಆಯುಷ್​ ವೈದ್ಯರ ಬೇಡಿಕೆ ಈಡೇರಿಸುವಂತೆ ಅಮನ್​ ಫೌಂಡೇಶನ್ ಮನವಿ

ಆದರೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸೇವೆಯಿಂದ ಹಿಂದೆ ಸರಿದಿದ್ದಾರೆ. ‌ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಆಯುಷ್ ವೈದ್ಯರ ಬೇಡಿಕೆ ಈಡೇರಿಸಬೇಕು ಎಂದು ಸಚಿವರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.‌

ABOUT THE AUTHOR

...view details