ಹುಬ್ಬಳ್ಳಿ:ಆಗ್ನೇಯ ರೈಲ್ವೆ ವಲಯದಿಂದ ಚಕ್ರದರಪುರದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ-2019ರಲ್ಲಿ ನೈಋತ್ಯ ರೈಲ್ವೆ ವಲಯವು ಮೂರನೇ ಸ್ಥಾನ ಪಡೆದುಕೊಂಡಿದೆ.
ಅಖಿಲ ಭಾರತ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ-2019: ನೈಋತ್ಯ ರೈಲ್ವೆ ವಲಯಕ್ಕೆ ಮೂರನೇ ಸ್ಥಾನ - ಹುಬ್ಬಳ್ಳಿ ವಿಭಾಗದ ಕಾರ್ಯಾಚರಣಾ ಶಾಖೆ
ಆಗ್ನೇಯ ರೈಲ್ವೆ ವಲಯದ ವತಿಯಿಂದ ಚಕ್ರದರಪುರದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ-2019ರಲ್ಲಿ ನೈಋತ್ಯ ರೈಲ್ವೆ ವಲಯವು ಮೂರನೇ ಸ್ಥಾನ ಪಡೆದುಕೊಂಡಿದೆ.

ಅಖಿಲ ಭಾರತ ರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧೆ-2019: ನೈಋತ್ಯ ರೈಲ್ವೆ ವಲಯಕ್ಕೆ ಮೂರನೇ ಸ್ಥಾನ
ಹುಬ್ಬಳ್ಳಿ ವಿಭಾಗದ ಕಾರ್ಯಾಚರಣೆ ಶಾಖೆಯ ಪಾಯಿಂಟ್ ಮೆನ್‌ಗಳಾದ ರಕ್ಷಿತ್ 70 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹುಬ್ಬಳ್ಳಿ ವಿಭಾಗದ ವಾಣಿಜ್ಯ ಶಾಖೆಯ ಲಗೇಜ್ ಪೋರ್ಟರ್ ವಾಸು 60 ಕೆಜಿ ವಿಭಾಗದಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಅನಿಲ್ ಪೂಜಾರಿ 65 ಕೆಜಿ ವಿಭಾಗದಲ್ಲಿ 5ನೇ ಸ್ಥಾನ ಪಡೆದುಕೊಂಡಿದ್ದು, ನೈಋತ್ಯ ರೈಲ್ವೆ ವಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.