ಕರ್ನಾಟಕ

karnataka

ETV Bharat / city

25 ವರ್ಷದಿಂದ ನಾಪತ್ತೆಯಾದ ವ್ಯಕ್ತಿ ವಾಪಸ್ ಬಂದಾಗ.. ಮರಳಿ ಗೂಡಿಗೆ ಸೇರಿಸಿದ ಗದಗನ ಯೋಧರು.. - After 25 years later Kenchappa returns to home

ಅನಕ್ಷರಸ್ಥರಾದ ಕೆಂಚಪ್ಪ ಅವರನ್ನು ಹಲವಾರು ವರ್ಷಗಳಿಂದ ಜೀತದಾಳಿನಂತೆ ದುಡಿಸಿಕೊಂಡು, ಸರಿಯಾಗಿ ಅನ್ನ, ನೀರು ನೀಡದೇ, ಕೂಲಿ ಹಣವನ್ನೂ ನೀಡದೆ ಹೋಟೆಲ್ ಮಾಲೀಕ ಸತಾಯಿಸಿದ್ದ. ಕೆಂಚಪ್ಪನವರು ಸತತ 25 ವರ್ಷಗಳಿಂದ ಉಸಿರುಗಟ್ಟುವ ವಾತಾವರಣದಲ್ಲಿದ್ದರು..

ಮನೆಗೆ ಮರಳಿದ ಕಲಘಟಗಿ ಪಟ್ಟಣದ ಗಾಂಧಿನಗರದ ವಡ್ಡರ ಓಣಿಯ ನಿವಾಸಿ ಕೆಂಚಪ್ಪ
ಮನೆಗೆ ಮರಳಿದ ಕಲಘಟಗಿ ಪಟ್ಟಣದ ಗಾಂಧಿನಗರದ ವಡ್ಡರ ಓಣಿಯ ನಿವಾಸಿ ಕೆಂಚಪ್ಪ

By

Published : Feb 26, 2021, 9:12 AM IST

Updated : Feb 26, 2021, 9:30 AM IST

ಹುಬ್ಬಳ್ಳಿ: ಕೂಲಿ ಮಾಡಲೆಂದು ರೈಲು ಹತ್ತಿ ಹೋಗಿದ್ದ ವ್ಯಕ್ತಿಯೋರ್ವ ಜಮ್ಮು-ಕಾಶ್ಮೀರ ತಲುಪಿದ್ದರು. ಕಳೆದ ಎರಡೂವರೆ ದಶಕಗಳ ಹಿಂದೆ ಮನೆ-ಮಠ, ಹೆಂಡತಿ-ಮಕ್ಕಳಿಂದ ದೂರವಾಗಿದ್ದ ವೃದ್ಧ ಇದೀಗ ಯೋಧರ ಸಹಕಾರದಿಂದ ಮರಳಿ ಮನೆ ಸೇರಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಗಾಂಧಿನಗರದ ವಡ್ಡರ ಓಣಿಯ ನಿವಾಸಿ ಕೆಂಚಪ್ಪ ಗೋವಿಂದಪ್ಪ ವಡ್ಡರ ಕಳೆದ 25 ವರ್ಷಗಳ ಹಿಂದೆ ಕೂಲಿ ಕೆಲಸಕ್ಕೆಂದು ಮನೆಯಿಂದ ಹೊರ ಹೋಗಿದ್ದರು. ಟಿಕೆಟ್ ತೆಗಿಸದೇ ಈತ ರೈಲು ಹತ್ತಿ ಹೋಗಿದ್ದ. ಹರಿದ್ವಾರದಲ್ಲಿ ತಪಾಸಣೆ ನಡೆಸಿದ ರೈಲು ಅಧಿಕಾರಿಗಳು ಅಲ್ಲೇ ಈತನನ್ನು ಇಳಿಸಿದ್ದಾರೆ.

ಅಲ್ಲಿಯೇ ಸ್ವಲ್ಪ ಕಾಲ ಇದ್ದು ಮತ್ತೆ ರೈಲು ಹತ್ತಿದ್ದ ಕೆಂಚಪ್ಪ ತಲುಪಿದ್ದು ಉತ್ತರಾಖಂಡ. ಹೀಗೆ ಊರೂರು‌ ಸುತ್ತಿ ನಂತರ ಜಮ್ಮು-ಕಾಶ್ಮೀರ ತಲುಪಿದ್ದರು. ಅಲ್ಲಿರುವ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಾ ಕಷ್ಟದ ಪರಿಸ್ಥಿತಿಯಲ್ಲಿಯೂ ಜೀವನ ನಡೆಸುತ್ತಿದ್ದ ಕೆಂಚಪ್ಪ ಸುಮಾರು 25 ವರ್ಷಗಳ ನಂತರ ಮರಳಿ ತವರೂರಿಗೆ ಮರಳಿದ್ದಾರೆ.

ಅನಕ್ಷರಸ್ಥರಾದ ಕೆಂಚಪ್ಪ ಅವರನ್ನು ಹಲವಾರು ವರ್ಷಗಳಿಂದ ಜೀತದಾಳಿನಂತೆ ದುಡಿಸಿಕೊಂಡು, ಸರಿಯಾಗಿ ಅನ್ನ, ನೀರು ನೀಡದೇ, ಕೂಲಿ ಹಣವನ್ನೂ ನೀಡದೆ ಹೋಟೆಲ್ ಮಾಲೀಕ ಸತಾಯಿಸಿದ್ದ. ಕೆಂಚಪ್ಪನವರು ಸತತ 25 ವರ್ಷಗಳಿಂದ ಉಸಿರುಗಟ್ಟುವ ವಾತಾವರಣದಲ್ಲಿದ್ದರು.

25 ವರ್ಷದ ಬಳಿಕ ಮನೆಗೆ ಮರಳಿದ ಕೆಂಚಪ್ಪ..

ಮರಳಿ ಊರಿಗೆ ಕಳಿಸದೇ ರಾತ್ರಿ ಸಮಯದಲ್ಲಿ ಕೈ-ಕಾಲು ಕಟ್ಟಿ ಕೂಡಿ ಹಾಕಿದ್ರಂತೆ. ಇದರಿಂದ ಮನನೊಂದು ಯಾರಿಗೂ ತನ್ನ ಸಮಸ್ಯೆ ಹೇಳಿಕೊಳ್ಳಲಾಗದೆ ನರಕ ಯಾತನೆ ಅನುಭವಿಸುತ್ತಿದ್ದ ಕೆಂಚಪ್ಪನ ಬಾಳಿನಲ್ಲಿ ದೇವರಂತೆ ಬಂದಿರುವವರು ಗದಗ ಮೂಲದ ಭಾರತೀಯ ಸೇನೆಯಲ್ಲಿರುವ ಯೋಧರು.

ಆಕಸ್ಮಿಕವಾಗಿ ಕೆಂಚಪ್ಪ ಕೆಲಸ ಮಾಡುವ ಹೋಟೆಲ್‌ಗೆ ಹೋದಾಗ ಗದಗ, ಮಂಗಳೂರು ಹಾಗೂ ಬೆಂಗಳೂರು ಭಾಗದ ಸೈನಿಕರು ಕನ್ನಡ ಮಾತನಾಡುವುದನ್ನು ಕಂಡು, ಕೆಂಚಪ್ಪ ತನ್ನನ್ನು ಪರಿಚಯಿಸಿಕೊಂಡಿದ್ದಾನೆ.

ಯೋಧರ ಜತೆಗೆ ಮನೆ, ಕುಟುಂಬ ಮತ್ತು ತನ್ನ ಸಮಸ್ಯೆಯ ಬಗ್ಗೆ ಹೇಳಿ ಕೊಂಡಾಗ ಸೈನಿಕರು ಇವರನ್ನು ಮರಳಿ ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಂಚಪ್ಪ ಅವರಿಗೆ ನಾಲ್ವರು ಗಂಡು, ಇಬ್ಬರು ಹೆಣ್ಣು ಮಕ್ಕಳಿವೆ. ಕೆಂಚಪ್ಪ ಮರಳಿ ಮನೆಗೆ ಮನೆಗೆ ಬಂದಿರುವುದಕ್ಕೆ ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆಯೇ ಕೆಂಚಪ್ಪ ಕಾಣೆಯಾದ ಬಗ್ಗೆ ಸಾಕಷ್ಟು ದೂರು ಸಹ ದಾಖಲಾಗಿದ್ದವು. ಕೆಂಚಪ್ಪನ ಆಗಮನದಿಂದ ಕುಂಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕುಟುಂಬಸ್ಥರು ಯೋಧರಿಗೆ ತುಂಬ ಹೃದಯದ ಧನ್ಯವಾದ ತಿಳಿಸಿದ್ದಾರೆ.

Last Updated : Feb 26, 2021, 9:30 AM IST

ABOUT THE AUTHOR

...view details