ಹುಬ್ಬಳ್ಳಿ: ಚುನಾವಣೆಯಲ್ಲಿ ನಾವು ಯಾರಿಗೇ ಬೆಂಬಲ ಕೊಟ್ರು ಕೂಡ, ಜನರ ಬೆಂಬಲವೇ ಮುಖ್ಯವಾಗಿರುತ್ತದೆ ಎಂದು ಸಿನಿಮಾ ನಟ ಶಿವರಾಜ್ ಕುಮಾರ್ ಹೇಳಿದ್ರು.
ಚುನಾವಣೆಯಲ್ಲಿ ನಮಗಿಂತ ಜನರ ಬೆಂಬಲವೇ ಮುಖ್ಯ : ನಟ ಶಿವಣ್ಣ - undefined
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶಿವಣ್ಣ ಕವಚ ಯಶಸ್ಸಿನ ಸಂಭ್ರಮ ಆಚರಿಸಿದರು. ನಗರದ ಅಪ್ಸರಾ ಚಿತ್ರ ಮಂದಿರಕ್ಕೆ ಭೇಟಿ ನೀಡಿದ್ರು. ಬಳಿಕ ತಮ್ಮ ಚಿತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದ್ರು.
![ಚುನಾವಣೆಯಲ್ಲಿ ನಮಗಿಂತ ಜನರ ಬೆಂಬಲವೇ ಮುಖ್ಯ : ನಟ ಶಿವಣ್ಣ](https://etvbharatimages.akamaized.net/etvbharat/images/768-512-2956045-thumbnail-3x2-shivanns.jpg)
ನಗರದಲ್ಲಿ ಕವಚ ಚಿತ್ರದ ಸಕ್ಸಸ್ ಹಂಚಿಕೊಳ್ಳಲು ಕರೆದಿದ್ದ ಮಾಧ್ಯಮಗೋಷ್ಟಿಯಲ್ಲಿ ಮಂಡ್ಯದಲ್ಲಿ ನಿಮ್ಮ ಬೆಂಬಲ ಯಾರಿಗೇ ಬೇಕು ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, ನಮಗೆ ಎಲ್ಲರೂ ಬೇಕು. ನಾವು ಯಾರಿಗೂ ಬೆಂಬಲ ಕೊಡುವುದಿಲ್ಲ, ಇಬ್ಬರಿಗೂ ಒಳ್ಳೆಯದಾಗಲಿ ಎಂದರು. ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಅವರದೇಯಾದ ಅಭಿಪ್ರಾಯಗಳಿರುತ್ತೆ. ಆ ಕಾರಣಕ್ಕೆ ನಾನು ಯಾರ ಪರ-ವಿರೋಧ ಪ್ರಚಾರಕ್ಕೆ ಹೋಗುತ್ತಿಲ್ಲ. ಹಿಂದೆ ನನ್ನ ಪತ್ನಿ ಪರ ಪ್ರಚಾರ ಮಾಡಿದ್ದೇ. ನಾವೂ ಎಷ್ಟೇ ಪ್ರಚಾರ ಮಾಡಿದರೂ ಜನರು ಯಾರನ್ನು ಆಯ್ಕೆ ಮಾಡಬೇಕೆನ್ನೊದು ಅವರಿಗೆ ಬಿಟ್ಟಿದ್ದು ಎಂದರು.
ಇನ್ನು ನಿಮ್ಮ ರಾಜಕೀಯ ಎಂಟ್ರಿ ಯಾವಾಗ್ ಅನ್ನೋ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು, ನಾನು ನಟನಾಗಿರಲು ಬಯಸುತ್ತೇನೆ. ನನಗೆ ಅಭಿನಯ, ಹಾಡು ಇಷ್ಟೇ ಸಾಕು.ನನಗೆ ಯಾವುದೇ ಪಕ್ಷದಿಂದ ಆಫರ್ ಬಂದಿಲ್ಲ ಹಾಗೂ ರಾಜಕೀಯಕ್ಕೆ ಬರುವ ವಿಚಾರ ಮಾಡಿಲ್ಲ ಎಂದರು.