ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಪೊಲೀಸರು ಫುಲ್ ಡ್ರಿಲ್ ಮಾಡಿದ್ದಾರೆ. ವಿದ್ಯಾನಗರ ಪೊಲೀಸರ ಮುಂದೆ ಆರೋಪಿಗಳಾದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ದುಮ್ಮವಾಡ ಕೊಲೆಯ ಹಿಂದಿನ ಕಾರಣಗಳನ್ನು ತಿಳಿಸಿದ್ದಾರೆ ಎನ್ನಲಾಗ್ತಿದೆ.
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ಪೊಲೀಸರೆದುರು ಸತ್ಯ ಬಾಯ್ಬಿಟ್ಟ ಹಂತಕರು! - ವಾಸ್ತು ತಜ್ಞ ಚಂದ್ರಶೇಖರ್ ನಿಧನ ಸುದ್ದಿ
ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರೆದುರು ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
'ನಮ್ಮನ್ನು ಬದುಕುವುದಕ್ಕೂ ಬಿಡುತ್ತಿರಲಿಲ್ಲ': "ನಾವಿಬ್ಬರೂ ಚಂದ್ರಶೇಖರ ಗುರೂಜಿ ಬಳಿಯೇ 10-12 ವರ್ಷಗಳ ಕಾಲ ಕೆಲಸ ಮಾಡಿದ್ದೇವೆ. 2016ರಲ್ಲಿ ಕೆಲಸ ಬಿಟ್ಟೆವು. ಅಲ್ಲಿಂದ ಹೊರಬಂದ ಬಳಿಕ ನಮ್ಮ ಪಾಡಿಗೆ ನಾವು ಸ್ವಂತ ಉದ್ಯೋಗ ಮಾಡುತ್ತಾ ಜೀವನ ಸಾಗಿಸುತ್ತಿದ್ದೆವು. ರಿಯಲ್ ಎಸ್ಟೇಟ್ ಸೇರಿ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೆವು. ಆದ್ರೆ ನಮ್ಮ ಪ್ರತೀ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು, ನಮ್ಮನ್ನು ಬದುಕುವುದಕ್ಕೂ ಬಿಡುತ್ತಿರಲಿಲ್ಲ. ವ್ಯಾಪಾರ ಮಾಡಲು ಸಹ ನಮ್ಮನ್ನು ಬಿಡಲಿಲ್ಲ. ಅಷ್ಟೊಂದು ಕಿರುಕುಳವನ್ನು ಅವರು ನಮಗೆ ನೀಡುತ್ತಿದ್ದರು. ಮಾನಸಿಕವಾಗಿಯೂ ಬಹಳಷ್ಟು ಕಿರುಕುಳ ನೀಡಿದ್ದಾರೆ. ನಾವು ಎಲ್ಲೇ ಯಾವುದೇ ಬ್ಯುಸಿನೆಸ್ ಮಾಡಿದರೂ ನಮಗೆ ಬೆದರಿಕೆ ಹಾಕುವ ಕೆಲಸಕ್ಕೆ ಗುರೂಜಿ ಕೈ ಹಾಕುತ್ತಿದ್ದರು. ಒಂದಿಲ್ಲೊಂದು ಸಮಸ್ಯೆ ತಂದಿಡುತ್ತಿದ್ದರು. ಬೇರೆ ಬೇರೆ ಊರುಗಳಲ್ಲಿ ಬ್ಯುಸಿನೆಸ್ ಮಾಡುತ್ತಿದ್ದರೂ ಇವರ ಕಿರಿಕಿರಿ ಮಾತ್ರ ತಪ್ಪಿರಲಿಲ್ಲ. ಹೀಗಾಗಿ ತಾಳ್ಮೆಗೆಟ್ಟು ನಾವು ಕೊಲೆ ಮಾಡಿದ್ದೇವೆ." ಎಂದು ಆರೋಪಿಗಳು ಹೇಳಿದ್ದಾರೆ ಎಂದು ತಿಳಿದುಬಂದಿದೆ.