ಹುಬ್ಬಳ್ಳಿ: ಏಕಕಾಲಕ್ಕೆ ನಾಲ್ಕು ಮಕ್ಕಳಿಗೆ ಮಹಿಳೆಯೊಬ್ಬರು ಜನ್ಮ ನೀಡಿದ ಅಪರೂಪದ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಹುಬ್ಬಳ್ಳಿಯಲ್ಲಿ ಒಮ್ಮೆಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ - women give birth to four childrens in hubli kims hospital
ಏಕಕಾಲಕ್ಕೆ ನಾಲ್ಕು ಮಕ್ಕಳಿಗೆ ಮಹಿಳೆಯೊಬ್ಬರು ಜನ್ಮ ನೀಡಿದ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ನಿಸ್ಸಾರ್ ಅಹ್ಮದ್ ಅಕ್ಕಿ ಎನ್ನುವವರ ಪತ್ನಿ ಮೆಹಬೂಬಿ ಇಂದು ಮುಂಜಾನೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು, ತಮ್ಮ ಎರಡನೇ ಹೆರಿಗೆಯಲ್ಲಿ 3 ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇನ್ನು ನಾಲ್ಕು ಮಕ್ಕಳೂ ಆರೋಗ್ಯವಾಗಿದ್ದು, ಮೂರು ಮಕ್ಕಳ ತೂಕ ಸರಿ ಸುಮಾರು 2 ಕೆ.ಜಿ ಯಿದೆ. ಆದ್ರೆ ಒಂದು ಮಗುವಿನ ತೂಕ ಮಾತ್ರ ಸ್ವಲ್ಪ ಕಡಿಮೆ ಇರುವುದರಿಂದ ನಾಲ್ಕು ಮಕ್ಕಳಿಗೆ ಎನ್ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೆಹಬೂಬಿ ಕಳೆದ 5 ವರ್ಷಗಳ ಹಿಂದೆ ಮೊದಲ ಹೆರಿಗೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಂದು ಎರಡನೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.