ಹುಬ್ಬಳ್ಳಿ:ಕಿಲ್ಲರ್ ಕೊರೊನಾ ವೈರಸ್ನಿಂದಾಗಿ ಶಾಲೆಗಳು ಬಾಗಿಲು ಹಾಕಿವೆ. ಆದರೆ, ಮಕ್ಕಳು ಶಾಲೆಯಲ್ಲಿ ಕಲಿಯುವ ಆಟ, ಪಾಠಗಳು ಕೊನೆವರೆಗೂ ಇರುವಂತಹದ್ದು. ಶಾಲೆಯ ಮಕ್ಕಳನ್ನು ಬಳಸಿಕೊಂಡು ಬಾಲ್ಯದ ನೆನಪನ್ನು ಮತ್ತೆ ಮರುಕಳಿಸುವಂತೆ ಹಾಡೊಂದನ್ನು ರಚಿಸುವ ಮೂಲಕ ಹುಬ್ಬಳ್ಳಿಯ ಶಿಕ್ಷಕರೊಬ್ಬರು ಗಮನ ಸೆಳೆದಿದ್ದಾರೆ.
ಹೌದು.. ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದ ಶ್ರೀಮತಿ ರುದ್ರಮ್ಮ ರಾಯಪ್ಪ ಗುಂಜಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಗುದ್ದಿನ ಅವರು, 'ಶಾಲೆಯ ಮಕ್ಕಳೊಂದಿಗೆ ಗೆಳೆಯರ ಜೋಡಿ ಆಟಿಲ್ಲ, ಶಾಲ್ಯಾಗ ಟೀಚರ್ ಪಾಠಿಲ್ಲಾ' ಎಂಬ ಡಿಜೆ ಸಾಂಗ್ ಸಂಯೋಜನೆ ಮಾಡಿ ಎಲ್ಲರ ಗಮನ ತಮ್ಮ ಶಾಲೆಯತ್ತ ಸೆಳೆಯುವಂತೆ ಮಾಡಿದ್ದಾರೆ.
ಬಸವರಾಜ ಪೂಜಾರ್ ಎಂಬ ವಿದ್ಯಾರ್ಥಿ ಈ ಹಾಡಿಗೆ ಧ್ವನಿ ನೀಡಿದ್ದು, ಮಕ್ಕಳ ಆಟ ಪಾಠದ ಚಿತ್ರೀಕರಣದ ಮೂಲಕ ವಿಡಿಯೋ ಡಿಜೆ ಸಾಂಗ್ ನಿರ್ಮಾಣ ಮಾಡಿದ್ದಾರೆ. ಕೊರೊನಾ ಸೋಂಕು ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆ ತಂದೊಡ್ಡಿದ ಪರಿಣಾಮಗಳನ್ನು ಸಾಹಿತ್ಯದ ಎಳೆ ಎಳೆಯಾಗಿ ಮೂಲಕ ಬಿಚ್ಚಿಟ್ಟಿದ್ದಾರೆ.