ಹುಬ್ಬಳ್ಳಿ:ಕೋರ್ಟ್ ಸರ್ಕಲ ಬಳಿನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ಸವಾರ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆಯಿತು.
ಬೈಕ್ ಸವಾರ ಮತ್ತು ಟೋಯಿಂಗ್ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ - ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮತ್ತು ಬೈಕ್ ಸವಾರ ವಾಗ್ವಾದ ನ್ಯೂಸ್
ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಿದ ಬೈಕ್ ಅನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ವಾಹನ ಸವಾರ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿ ಮಧ್ಯೆ ವಾಗ್ವಾದ ಏರ್ಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
![ಬೈಕ್ ಸವಾರ ಮತ್ತು ಟೋಯಿಂಗ್ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ A quarrel between the bike rider and towing police in hubli](https://etvbharatimages.akamaized.net/etvbharat/prod-images/768-512-5857772-thumbnail-3x2-lek.jpg)
ಬೈಕ್ ಸವಾರ ಮತ್ತು ಟೋಯಿಂಗ್ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ
ನೋ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದ ವ್ಯಕ್ತಿ- ಪೊಲೀಸರಿಂದ ವಾಗ್ವಾದ
ನೋ ಪಾರ್ಕಿಂಗ್ನಲ್ಲಿ ಬೈಕ್ ನಿಲ್ಲಿಸಿದಾಗ ಟೋಯಿಂಗ್ ಸಿಬ್ಬಂದಿ ಮೈಕ್ನಲ್ಲಿ ಎರಡು ಬಾರಿ ಕೂಗಿದ ಮೇಲೆ ಬೈಕ್ಗೆ ಸಂಬಂಧಿಸಿದವರು ಅದನ್ನು ತಗೆದುಕೊಳ್ಳದಿದ್ರೆ ಬೈಕ್ ಅನ್ನು ಎತ್ತಿಕೊಂಡು ಹೋಗಬೇಕು. ಆದ್ರೆ ಟೋಯಿಂಗ್ ಸಿಬ್ಬಂದಿ ಯಾವುದೇ ಅನೌನ್ಸ್ ಮಾಡದೇ ಏಕಾಏಕಿ ಬೈಕ್ ಅನ್ನು ತೆಗೆದುಕೊಂಡು ಹೋಗಿದ್ದಕ್ಕೆ ಸವಾರ ರಂಪಾಟ ಮಾಡಿದ್ದಾನೆ. ಇದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.
ಅಲ್ಲದೇ ಪೊಲೀಸರು ಮತ್ತು ಯುವಕನ ಮಧ್ಯೆ ಕೆಲ ಕಾಲ ಮಾತಿನ ಚಕಮಕಿ ಏರ್ಪಟ್ಟಿತ್ತು. ಆಗ ಪೊಲೀಸರು ಯುವಕರಿಗೆ ತಿಳುವಳಿಕೆ ಹೇಳಿ ಬೈಕ್ ಅನ್ನು ಮರಳಿ ನೀಡಿದ್ರು.