ಹುಬ್ಬಳ್ಳಿ: ಕೋವಿಡ್ನಿಂದ ಕಂಗಾಲಾಗಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೆರೆಯಿಂದ ಕಲುಷಿತವಾದ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಆರೋಪ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳದಲ್ಲಿ ಕೇಳಿಬಂದಿದೆ.
ಕುಡಿಯುವ ನೀರಿನಲ್ಲಿ ಪಾಚಿಗಟ್ಟಿದ ನೀರು, ಕಸ-ಕಡ್ಡಿ, ಉರಿ ಹುಳುಗಳು ಹರಿದು ಬರುತ್ತಿವೆ. ಮೊದಲೇ ಕೊರೊನಾ ವೈರಸ್ನಿಂದ ಇಡೀ ಮಾನವ ಕುಲ ನಲುಗಿ ಹೋಗಿದೆ. ಇಂತಹ ಸಂದರ್ಭಗಳಲ್ಲಿ ಈ ರೀತಿಯ ನೀರು ಸರಬರಾಜು ಮಾಡಿದರೆ ಏನಾಗಬಾರದು. ಅಲ್ಲದೆ ಈ ಕೆರೆ ಏರಿಯ ಮೇಲಿನ ಗಲೀಜು ನೋಡಿದರೆ ಎಂತವರಿಗಾದರೂ ಅಚ್ಚರಿಯಾಗುತ್ತದೆ. ಇದು ಮನುಷ್ಯರು ಉಪಯೋಗಿಸುವ ನೀರೋ ಅಥವಾ ಪ್ರಾಣಿಗಳದ್ದೋ ಎಂಬ ಅನುಮಾನ ಕೂಡ ಮೂಡುತ್ತದೆ.