ಧಾರವಾಡ:ನವಲೂರ ನಿಲ್ದಾಣದ ಬಳಿಮರದ ಮೇಲಿಂದಬಿದ್ದು ಹೊಟ್ಟೆ ಹರಿದುಕೊಂಡಿದ್ದ ಕೋತಿಗೆ ಯುವಕರ ತಂಡವೊಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದೆ. ಮರದ ಮೇಲಿಂದ ಬಿದ್ದು ಕೋತಿ ಹೊಟ್ಟೆ ಹರಿದು ಕರಳುಗಳೆಲ್ಲ ಹೊರಬಂದಿದ್ದವು. ಅಂತಹ ಸ್ಥಿತಿಯಲ್ಲಿದ್ದ ಕೋತಿಗೆ ಧಾರವಾಡದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಧಾರವಾಡದ ವನ್ಯಜೀವಿ ಪ್ರಿಯರು ಈ ಮಾನವೀಯ ಕಾರ್ಯ ಮಾಡಿದ್ದಾರೆ.
ಧಾರವಾಡ: ಮರದಿಂದ ಬಿದ್ದು ಗಾಯಗೊಂಡ ಕೋತಿಗೆ ಶಸ್ತ್ರಚಿಕಿತ್ಸೆ - Monkey fallen from the tree
ಮರದಿಂದ ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ಕೋತಿಯನ್ನು ಯುವಕರ ತಂಡವೊಂದು ರಕ್ಷಿಸಿ, ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದಾರೆ. ಕೋತಿ ಹೊಟ್ಟೆ ಹರಿದು ಹೊರಕ್ಕೆ ಬಂದ ಕರುಳನ್ನು ಜೋಡಿಸಿ, ಡಾ. ವಿನೀತ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಮರದಿಂದ ಬಿದ್ದು ಗಾಯಗೊಂಡ ಕೋತಿಗೆ ಶಸ್ತ್ರಚಿಕಿತ್ಸೆ ಮಾಡಿದ ಯುವಕರ ತಂಡ
ಗಂಭೀರ ಸ್ಥಿತಿಯಲ್ಲಿದ್ದ ಕೋತಿಯನ್ನು ಗಮನಿಸಿದ ರಕ್ಷಣಾ ತಂಡ, ರಕ್ಷಿಸಿ ವೈದ್ಯರ ಬಳಿ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಪ್ರಾಣಿಪ್ರಿಯ ಸೋಮಶೇಖರ ಚನ್ನಶೆಟ್ಟಿ ಮತ್ತು ತಂಡದವರು ಮಾನವೀಯ ಕಾರ್ಯ ಮಾಡಿದ್ದಾರೆ. ನವಲಗುಂದ ಪಶು ವೈದ್ಯಾಧಿಕಾರಿ ಡಾ.ವಿನೀತ ಶಸ್ತ್ರಚಿಕಿತ್ಸೆ ಮಾಡಿದ್ದು, ಕರುಳುಗಳನ್ನು ಮರುಹೊಂದಿಸಿ ಹೊಲಿಗೆ ಹಾಕಿದ್ದಾರೆ. ಸದ್ಯ ಕೋತಿ ಆರೋಗ್ಯವಾಗಿದೆ.
ಇದನ್ನೂ ಓದಿ:20ಕ್ಕೂ ಹೆಚ್ಚು ಶರ್ಟ್ ಧರಿಸಿದ್ದ ಮಾನಸಿಕ ಅಸ್ವಸ್ಥ: ಬೈಕ್ ಗುದ್ದಿದ್ದರೂ ಪ್ರಾಣಾಪಾಯದಿಂದ ಪಾರು!