ಕರ್ನಾಟಕ

karnataka

ETV Bharat / city

ಹುಬ್ಬಳ್ಳಿಯಲ್ಲಿ ಗಾಯಗೊಂಡ ಹಸು ರಕ್ಷಣೆಗೆ ಬಾರದ ಪಶು ವೈದ್ಯರ ತಂಡ

ನಗರದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಹಸುವೊಂದು ವೈದ್ಯರ ನಿರ್ಲಕ್ಷ್ಯ ದಿಂದ ಸಾವನ್ನಪಿದೆ. ಜೀವನ್ಮರಣದ ಮದ್ಯ ಹೋರಾಟ ನಡೆಸುತ್ತಿದ್ದ ಹಸುವನ್ನು ರಕ್ಷಿಸಲು ಯುವಪಡೆ ಹಲವಾರು ವೈದ್ಯರಿಗೆ ಕರೆ ಮಾಡಿ ಬರುವಂತೆ ಕೇಳಿಕೊಂಡರು ವೈದ್ಯರು ಲಾಕ್​ಡೌನ್​ ಅಂತ ಮನೆಯಲ್ಲಿಯೇ ಉಳಿದಿದ್ದು ವಿಪರ್ಯಾಸ ಎನಿಸುತ್ತಿದೆ.

By

Published : Apr 24, 2020, 1:45 PM IST

a-cow-death-in-accident-in-hubli-near-shanthiniketana
ಹುಬ್ಬಳ್ಳಿಯಲ್ಲಿ ಗಾಯಗೊಂಡ ಹಸು

ಹುಬ್ಬಳ್ಳಿ : ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಹಸುವೊಂದು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಶಾಂತಿನಿಕೇತನ ಬಳಿ ನಡೆದಿದೆ.

ಗಾಯಗೊಂಡು ನರಳಾಡುತ್ತಿದ್ದ ಹಸುವನ್ನು ಉಳಿಸಲು ಮಂಜುನಾಥ ಹೆಬಸೂರು ಹಾಗೂ ಆತನ ಸಂಗಡಿಗರು ಪ್ರಯತ್ನ ನಡೆಸಿದರು. ಹಸುವಿಗೆ ಚಿಕಿತ್ಸೆ ಕೊಡಿಸಲು ಐದಾರು ಪಶು ವೈದ್ಯಾಧಿಕಾರಿಗಳಿಗೆ ಫೋನ್ ಕರೆ ಮಾಡಿದ್ದಾರೆ. ಆದ್ರೆ ವೈದ್ಯರು ಲಾಕ್ ಡೌನ್ ನೇಪ ಹೇಳಿ ಕೈತೊಳೆದುಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಗಾಯಗೊಂಡ ಹಸು ರಕ್ಷಣೆಗೆ ಬಾರದ ಪಶು ವೈದ್ಯ ತಂಡ

ತಮ್ಮ ಕಣ್ಣುಂದೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹಸುವಿನ ಜೀವನ ಉಳಿಸಲು ಯುವಕರು ಶತಪ್ರಯತ್ನ ಮಾಡಿದರು. ಆದರೆ, ತಲೆಗೆ ಗಂಭೀರ ಗಾಯವಾಗಿದ್ದ ಪರಿಣಾಮ ಹಸು ಮೃತಪಟ್ಟಿದೆ. ಯುವಕರ ಶ್ರಮಕ್ಕ ವೈದ್ಯರು ಮಾನವೀತೆ ತೋರಿದ್ದರೆ, ಹಸುವಿನ ಪ್ರಾಣ ಉಳಿಯುತ್ತಿತ್ತು.

ಆದರೆ, ವೈದ್ಯರ ಅಮಾನವೀಯತೆಗೆ ಹಸು ಪ್ರಾಣ ಕಳೆದುಕೊಂಡರೆ, ಯುವಕರು ಪ್ರಾಣ ಉಳಿಸಲಾಗಲಿಲ್ಲ ಎಂಬ ನೋವಿನಿಂದ ಮನೆ ಕಡೆ ಹೆಜ್ಜೆ ಹಾಕುವಂತೆ ಮಾಡಿತು.

ABOUT THE AUTHOR

...view details