ಕರ್ನಾಟಕ

karnataka

ETV Bharat / city

ವಾಣಿಜ್ಯ ನಗರಿಯಲ್ಲಿ ಯುವಕನ ಮೇಲೆ ಗೂಳಿ ದಾಳಿ: ಆಸ್ಪತ್ರೆಗೆ ದಾಖಲು - bull attack

ಕಳೆದ ರಾತ್ರಿ ಹುಬ್ಬಳ್ಳಿ ನಗರದ ಜವಳಿ ಸಾಲಿನಲ್ಲಿ ಕಂಡ ಕಂಡವರ ಮೇಲೆ ಗೂಳಿಯೊಂದು ನುಗ್ಗಿದೆ. ಅದನ್ನು ಓಡಿಸಲು ಹೋದ ಯುವಕನ ಮೇಲೆ ಗೂಳಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕನ ಮೇಲೆ ಗೂಳಿ ದಾಳಿ
ಯುವಕನ ಮೇಲೆ ಗೂಳಿ ದಾಳಿ

By

Published : Mar 6, 2021, 10:53 AM IST

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಬಿಡಾಡಿ ದನಗಳು ಮತ್ತು ಗೂಳಿಗಳ ಹಾವಳಿ ಹೆಚ್ಚಾಗಿದ್ದು, ನಗರದಲ್ಲಿ ಕಳೆದ ರಾತ್ರಿ ಗೂಳಿ ಹುಚ್ಚಾಟಕ್ಕೆ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಯುವಕನ ಮೇಲೆ ಗೂಳಿ ದಾಳಿ

ಕಳೆದ ರಾತ್ರಿ ನಗರದ ಜವಳಿ ಸಾಲಿನಲ್ಲಿ ಕಂಡ ಕಂಡವರ ಮೇಲೆ ಗೂಳಿಯೊಂದು ಎರಗಿದೆ. ಓಡಿಸಲು ಹೋದ ಯುವಕನ ಮೇಲೆ ಗೂಳಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೂಳಿ ದಾಳಿಯಿಂದ ನಗರದ ಜನತೆ ಆತಂಕಕ್ಕೊಳಗಾಗಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ದಿನಗಳಿಂದ ಬಿಡಾಡಿ ದನಗಳು ಸಾರ್ವಜನಿಕರ ‌ಮೇಲೆ ದಾಳಿ ನಡೆಸುತ್ತಿವೆ. ಒಂದು ವಾರದೊಳಗೆ ಬಿಡಾಡಿ ದನಗಳನ್ನು ಹಿಡಿದು ಗೋ ಶಾಲೆಗೆ ಬಿಡಬೇಕು. ಇಲ್ಲದಿದ್ದರೆ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details