ಧಾರವಾಡ: ಇಲ್ಲಿನ ಎಸ್‌ಡಿಎಂ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಮಹಾಮಾರಿ ಕೋವಿಡ್ ತಲ್ಲಣ ಮುಂದುವರೆದಿದ್ದು, ಇಂದು ಮತ್ತೆ 77 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ 204 ಜನರಲ್ಲಿ ಹಾಗೂ ಇಂದು 77 ಪ್ರಕರಣಗಳು ಸೇರಿ ಒಟ್ಟು 281 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಎಲ್ಲರಿಗೂ ಚಿಕಿತ್ಸೆ, ಔಷಧೋಪಚಾರ ನಡೆಯುತ್ತಿದೆ. ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ತಪಾಸಣೆಗೆ ಒಳಪಟ್ಟವರು ಪ್ರತ್ಯೇಕವಾಗಿ ಇರಲು ಸೂಚಿಸಲಾಗಿದ್ದು, 1,822 ಮಂದಿಯ ಕೋವಿಡ್ ಪರೀಕ್ಷೆಯ ವರದಿಗಳು ಬರಬೇಕಾಗಿದೆ ಎಂದು ಡಿಸಿ ಹೇಳಿದ್ದಾರೆ.
ಧಾರವಾಡ ಎಸ್‌ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ 77 ಮಂದಿಗೆ ಕೋವಿಡ್ ದೃಢ! - ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಕಳೆದ ಕೆಲ ದಿನಗಳಿಂದ ತಲ್ಲಣ ಮೂಡಿಸಿರುವ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಇಂದು ಕೂಡ 77 ಮಂದಿಗೆ ಕೋವಿಡ್ ಇರುವುದು ದೃಢಪಟ್ಟಿದೆ.
ಧಾರವಾಡ ಎಸ್‌ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ 77 ಮಂದಿಗೆ ಕೋವಿಡ್ ದೃಢ
ಎಸ್.ಡಿ.ಎಂ.ಮೆಡಿಕಲ್ ಕಾಲೇಜಿನಲ್ಲಿ ಕಾಣಿಸಿಕೊಂಡಿರುವ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ.
ಇದನ್ನೂ ಓದಿ:ಧಾರವಾಡ ಎಸ್‌ಡಿಎಂ ಮೆಡಿಕಲ್ ಕಾಲೇಜು ಕೋವಿಡ್ ಸ್ಫೋಟದ ಎಫೆಕ್ಟ್; ಸಮೀಪದ ಶಾಲಾ - ಕಾಲೇಜುಗಳಿಗೆ ರಜೆ