ಕರ್ನಾಟಕ

karnataka

ETV Bharat / city

ಕೊರೊನಾ ರೆಡ್ ಝೋನ್ ಧಾರವಾಡದಲ್ಲಿ ಒಂದೇ ದಿನ 61 ಶಂಕಿತರು ಪತ್ತೆ! - ಕೊರೊನಾ ಬ್ಯುಲೆಟಿನ್ ಬಿಡುಗಡೆ

ಧಾರವಾಡ ಜಿಲ್ಲೆಯಲ್ಲಿ ಇಂದು ಕೊರೊನಾ ಬ್ಯುಲೆಟಿನ್ ಬಿಡುಗಡೆಯಾಗಿದ್ದು, ಒಂದೇ ದಿನ 61 ಶಂಕಿತರು ಪತ್ತೆಯಾಗಿದ್ದಾರೆ. ಈವರೆಗೆ ಕೇವಲ ಎರಡು ಪ್ರಕರಣಗಳಿಗೆ ಸಾಕ್ಷಿಯಾಗಿದ್ದ ಜಿಲ್ಲೆಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಶಂಕಿತ ಪ್ರಕರಣಗಳು ಕಂಡುಬಂದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

61 suspects detained in Red Zone, Dharwad in one day
ರೆಡ್ ಜೋನ್ ಧಾರವಾಡದಲ್ಲಿ ಒಂದೇ ದಿನ 61 ಶಂಕಿತರು ಪತ್ತೆ: ಪರೀಕ್ಷೆಗೆ ರವಾನೆ..!

By

Published : Apr 16, 2020, 7:37 PM IST

ಧಾರವಾಡ: ಇಂದು ಜಿಲ್ಲೆಯ ಕೊರೊನಾ ಬ್ಯುಲೆಟಿನ್ ಬಿಡುಗಡೆಗೊಂಡಿದ್ದು, ಒಂದೇ ದಿನ 61 ಶಂಕಿತರು ಪತ್ತೆಯಾಗಿದ್ದಾರೆ. 24 ಗಂಟೆಗಳಲ್ಲಿ 61 ಜನರಲ್ಲಿ ಶಂಕಿತ ಕೊರೊನಾ ಗುಣಲಕ್ಷಣ ಪತ್ತೆಯಾಗಿದ್ದು, ಶಂಕಿತರ ಕಫದ ಮಾದರಿಯನ್ನು ಹುಬ್ಬಳ್ಳಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ನಿನ್ನೆಯವರೆಗೆ ದಾಖಲಾಗಿದ್ದ 95 ಶಂಕಿತರ ಪೈಕಿ 75 ಜನರ ವರದಿ ನೆಗೆಟಿವ್ ಬಂದಿದ್ದು, ಇನ್ನೂ 20 ಜನರ ವರದಿಗಳು ಬಾಕಿ ಇವೆ. 7 ಜನರನ್ನು ಆಸ್ಪತ್ರೆಯ ಐಸೋಲೇಷನ್ ವಾರ್ಡ್​ನಲ್ಲಿಡಲಾಗಿದೆ. ಇಲ್ಲಿಯವರೆಗೆ ಒಟ್ಟು 1189 ಜನರ ಮೇಲೆ‌ ನಿಗಾ ವಹಿಸಲಾಗಿದೆ. 476 ಜನರಿಗೆ 14 ದಿನಗಳ ಹೋಮ್ ಐಸೋಲೇಷನ್ ಇಡಲಾಗಿದೆ. 110 ಜನರ 14 ದಿನಗಳ ಐಸೋಲೇಷನ್ ಹಾಗೂ 592 ಜನರ 28 ದಿನಗಳ ಐಸೋಲೇಷನ್ ಪೂರ್ಣಗೊಂಡಿದೆ.

ABOUT THE AUTHOR

...view details